ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟ ಮಾಜಿ ಮಂತ್ರಿ !

V Somanna
Published on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ವಿಷಯ ವರಿಷ್ಠರ ಅಂಗಳದಲ್ಲಿದೆ. ನನಗೆ ಅವಕಾಶ ಕೊಟ್ಟರೆ ಸ್ಟ್ ಕ್ಲಾಸ್ ಆಗಿ ಕೆಲಸ ಮಾಡುವೆ, ಈಗಲೂ ನನ್ನಲ್ಲಿ ಉತ್ಸಾಹವಿದೆ ಎಂದು ಮಾಜಿ ಮಂತ್ರಿ ವಿ.ಸೋಮಣ್ಣ ಬೇಡಿಕೆಯಿಟ್ಟರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಪಕ್ಷದ ಸೇವೆ ಮಾಡಲು ಅವಕಾಶ ಕೊಡಿ ಎಂದು ವರಿಷ್ಠರ ಬಳಿ ಕೇಳಿಕೊಂಡಿದ್ದೇನೆ. ಕಾಂಗ್ರೆಸ್‌ನಲ್ಲಿ ಇರುವ ಹಲವು ಕಾರ್ಯಾಧ್ಯಕ್ಷ ಹುದ್ದೆಗಳಿವೆ. ಅದೇ ವ್ಯವಸ್ಥೆ ನಮ್ಮಲ್ಲೂ ತರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಕುರಿತು ಪ್ರಶ್ನೆಗೆ ಉತ್ತರಿಸಿ, ನಾನು ದೊಡ್ಡವರ ಮಾತು ಕೇಳಿ ಹೀಗಿದೀನಿ, ಒಮ್ಮೆ ತಪ್ಪು ಮಾಡಿರುವೆ. ಆ ಕಾಲ ಬಂದಾಗ ಯೋಚನೆ ಮಾಡೋಣವೆಂದು ನುಣುಚಿಕೊಂಡರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ ಏರ್ಪಡಲಿದೆ ಎಂಬ ವಿಶ್ಲೇಷಣೆ ನಡೆದಿದೆ. ಆದರೆ ಯಾರು ಏನೇ ಹೇಳಲಿ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿ.ಸೋಮಣ್ಣ ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net