

ಬೆಂಗಳೂರು: ಚುನಾವಣೆ ಸಮೀಪಿಸಿದಂತೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ, ಬಿಬಿಎಂಪಿಯಲ್ಲಿ ಮತದಾರರ ಚೀಟಿ ಅಕ್ರಮ, ಹೀಗೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿಕೊಂಡಿದೆ. ಆದರೂ ರಣೋತ್ಸಾದಲ್ಲೇ ಇರುವ ಬಿಜೆಪಿ ಫೇಸ್ಬುಕ್ನಲ್ಲಿ ಕಾಂಗ್ರೆಸ್ ವಿರುದ್ಧ ಫುಲ್ ಫೈರಿಂಗ್ ನಡೆಸಿದೆ.
ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ಡಿ.ಕೆ ಶಿವಕುಮಾರ್ ರೌಡಿಗಳ ರಾಜ ಕೊತ್ವಾಲ್ನ ಚಹಾ ಲೋಟ ಎತ್ತುತ್ತಿದ್ರು ಎಂದು ಟಾಂಗ್ ನೀಡಿದೆ. 'ಡಿಕೆಶಿಯನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ಪಟ್ಟಿ ಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ ಹೊಡೆದ ಮರಿ ರೌಡಿ ಮಹಮ್ಮದ್ ನಲಪಾಡ್ವರೆಗೂ ಇದೆ' ರೌಡಿ ವಿಷಯದಲ್ಲಿ ಕಾಂಗ್ರೆಸ್ ಕಾಲೆಳೆದಿದೆ.
ಇನ್ನೂ ಅನೇಕ ಪ್ರಕರಣಗಳನ್ನು ನೆನಪಿಸಿರುವ ಬಿಜೆಪಿ 'ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ಕುಖ್ಯಾತ ಕೊಲೆ ಅರೋಪಿ ವಿನಯ್ ಕುಲಕರ್ಣಿ ಬಗ್ಗೆ ಮಾತಾಡಲ್ಲವೇಕೆ? "ಕೆಜೆ ಜಾರ್ಜೇ ನನ್ನ ಸಾವಿಗೆ ಕಾರಣ" ಎಂದು ಜೀವಬಿಟ್ಟ ಡಿವೈಎಸ್ಪಿ ಗಣಪತಿ ನೆನಪಿದೆಯೇ? 2011 ರಲ್ಲಿ ಜಮೀರ್ ಅಹ್ಮದ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ರೆ ಎಂದು ಗ್ಯಾಂಗ್ ಲೀಡರ್ ಡಿ. ಕೆ. ಶಿವಕುಮಾರ್ ಸುಮ್ಮನಿದ್ದರೆ? ನಿಮ್ಮ ಡಿ.ಕೆ. ಸುರೇಶ್ ಪಿಎಸ್ಐ ಟಿ. ಆರ್. ಶ್ರೀನಿವಾಸ್ಗೆ ಸಾರ್ವಜನಿಕವಾಗಿ ಅವಮಾನಿಸುವುದರ ಜೊತೆಗೆ ಜೀವ ಬೆದರಿಕೆಯೂ ಹಾಕ್ತಾರೆ' ಎಂದು ಪ್ರತ್ಯುತ್ತರ ನೀಡಿದೆ.
ಇನ್ನು ಪೋಸ್ಟ್ನ ಕಡೆಯಲ್ಲೂ ಡಿ.ಕೆ ಶಿವಕುಮಾರ್ರನ್ನು ಟಾರ್ಗೆಟ್ ಮಾಡಿದ ಬಿಜೆಪಿ 'ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ ಕಾಂಗ್ರೆಸ್ ರೌಡಿ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿಕೆಶಿ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ' ಎಂದು ಕಾಲೆಳೆದಿದೆ.