ಅಕ್ರಮ ಪಾಕಿಗಳ ಮಾಹಿತಿಗಾಗಿ ವಾರ್ ರೂಮ್ ತೆರೆದ ಬಿಜೆಪಿ ರೆಬೆಲ್ಸ್ | State government has not yet provided information

Aravind limbavali 1
Published on

ಬೆಂಗಳೂರು: ವಕ್ಫ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಂದೋಲನ ನಡೆಸಿದ್ದ ಬಿಜೆಪಿ ರೆಬೆಲ್ ನಾಯಕರು ಮತ್ತೊಮ್ಮೆ ಕ್ಷೇತ್ರ ಕಾರ್ಯಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶಗಳ ನಾಗರಿಕರ ಅಕ್ರಮ ವಾಸದ ಮಾಹಿತಿ ಪಡೆಯಲು ವಾರ್ ರೂಮ್ ತೆರೆಯಲು ನಿರ್ಧರಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹುಟ್ಟು ಹಬ್ಬ ನೆಪದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರ ನಿವಾಸದಲ್ಲಿ ಬಂಡಾಯ ಬಣದ ನಾಯಕರು ಗುರುವಾರ ಸಭೆ ಸೇರಿ, ಈ ನಿರ್ಧಾರ ಕೈಗೊಂಡಿದೆ. ಪಕ್ಷದಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೈರಾದದ್ದು ಗಮನಾರ್ಹ ಸಂಗತಿಯಾಗಿದೆ.

ಸಭೆಯ ನಂತರ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಪಹೆಲ್ಗಾಮ್‌ನಲ್ಲಿ ಉಗ್ರರ ಅಮಾನವೀಯ ಕೃತ್ಯದ ವಿರುದ್ಧ ದೇಶದ ಜನರು ಒಂದಾಗಿದ್ದಾರೆ. ಕೆಲವರು ಓರೆಕೋರೆ ಹೇಳಿಕೆ ನೀಡಿದ್ದರೂ ನಂತರ ಸರಿಪಡಿಸಿಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಸರ್ಕಾರ ಪತ್ತೆ ಹಚ್ಚಿ ಹೊರಗಟ್ಟಬೇಕು. ಬಾಂಗ್ಲಾದಿಂದ ಅಕ್ರಮವಾಗಿ ರಾಜ್ಯಕ್ಕೆ ಬಂದವರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವ ಗುಮಾನಿಯಿದೆ. ಪಾಕಿಸ್ತಾನ, ಬಾಂಗ್ಲಾದ ಅಕ್ರಮ ವಾಸಿಗಳ ಬಗ್ಗೆ ರಾಜ್ಯ ಸರ್ಕಾರ ಇನ್ನೂವರೆಗೆ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದರು.

ವಾರ್‌ರೂಮ್ ಕಾರ್ಯಾರಂಭ

ರಾಜ್ಯದಲ್ಲಿ ಅಕ್ರಮವಾಗಿ ಪಾಕಿಸ್ತಾನ, ಬಾಂಗ್ಲಾ ಪ್ರಜೆಗಳು ನೆಲೆಸಿರುವುದು ಗೊತ್ತಾದರೆ ಅಂತಹವರ ಮಾಹಿತಿ ಪಡೆಯಲು ವಾರ್ ರೂಮ್ (ಸಂಖ್ಯೆ: 9035675734/ 8217686764) ತೆರೆದಿದ್ದು, ತಕ್ಷಣದಿಂದ ಕಾರ್ಯಾರಂಭಿಸಲಿದೆ.

ಅಕ್ರಮವಾಗಿ ನೆಲೆಸಿದವರು ಮಾತ್ರವಲ್ಲ, ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತವರು, ಊಟೋಪಾಚಾರ, ಆಶ್ರಯ ಕೊಟ್ಟವರು, ತರಬೇತಿ ನೀಡಿದವರ ಮಾಹಿತಿಯನ್ನು ಜನರು ನೀಡಬಹುದಾಗಿದೆ.

ವಾರ್‌ರೂಮ್‌ಗೆ ಬರುವ ಮಾಹಿತಿಯನ್ನು ವಿಶ್ಲೇಷಿಸಿ ಕೆಲ ಸ್ಥಗಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸ್ಥಳೀಯರ ಜತೆಗೂ ಚರ್ಚಿಸಲಿದ್ದೇವೆ. ದೇಶಕ್ಕೆ ಗಂಡಾಂತರ ತರುವ ಸಮಸ್ಯೆಯಿದಾಗಿದ್ದು, ದೇಶಪ್ರೇಮಿಗಳೆಲ್ಲ ಸೈನಿಕರಾಗಿ ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ಬಿಜೆಪಿಯಿಂದಲೇ ಈ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ದೇಶ ಪ್ರೇಮಿಗಳೆಲ್ಲ ಕೈಜೋಡಿಸಲು ಕೋರಿದ್ದೇವೆ. ನಾವು ಕೂಡಾ ಬಿಜೆಪಿ ಹೆಸರಲ್ಲೇ ಮಾಡುತ್ತಿದ್ದೇವೆ ಎಂದು ಅರವಿಂದ ಲಿಂಬಾವಳಿ ಸಮಜಾಯಿಷಿ ನೀಡಿದರು.

ಕರಾವಳಿ ‘ಸಹಾಯವಾಣಿ’

ವಳಿ ‘ಸಹಾಯವಾಣಿ’‘ದೇಶಕ್ಕಾಗಿ ಜಾಗೃತರಾಗೋಣ’ವೆಂಬ ೋಷವಾಕ್ಯದಡಿ ಕರಾವಳಿ ಜಿಲ್ಲೆಗೆ ಸೀಮಿತವಾಗಿ ಬಿಜೆಪಿ ಶಾಸಕ, ಮಾಜಿ ಸಚಿವ ವಿ.ಸುನಿಲ್‌ಕುಮಾರ್ ಅವರು ಸಹಾಯವಾಣಿ (ಮೊಬೈಲ್ ಸಂಖ್ಯೆ: 6366454238/ 7348906249) ಸ್ಥಾಪಸಿದ್ದಾರೆ.

ಗಡಿಯಾಚೆಗಿನ ವೈರಿಯ ನಿಯಮತ್ರಣಕ್ಕೆ ಸೇನೆ ಇದೆ. ಗಡಿಯೊಳಗಿನ ವೈರಿ ಸದೆಬಡಿಯಲು ನಾವೆಲ್ಲ ಸೇನಾನಿಯಾಗೋಣ. ಎಲ್ಲವನ್ನೂ ಸರ್ಕಾರ ಮಾಡಲಿ ಎನ್ನುವ ಬದಲು ದುರಿತ ಕಾಲದಲ್ಲಿ ಜವಾಬ್ದಾರಿ ಮೆರೆಯೋಣ.

ಕರಾವಳಿ ಜಿಲ್ಲೆಯ ವ್ಯಾಪ್ತಿಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಕಣ್ಣಿಡೋಣ. ಇಂತಹವರ ಬಗ್ಗೆ ಮಾಹಿತಿ ಲಭಿಸಿದಾಗ ತಕ್ಷಣ ಸಹಾಯವಾಣಿಗೆ ಮಾಹಿತಿ ನೀಡಿ.

ಅಂತಹವರ ವಿರುದ್ಧ ಸಂಬಂಧಪಟ್ಟ ಇಲಾಖೆ/ ಸರ್ಕಾರಕ್ಕೆ ಕಳಿಸಿ ಕ್ರಮ ಆಗುವಂತಹ ಕೆಲಸವನ್ನು ನಾವು ಮಾಡಲಿದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಶಾಸಕ ವಿ.ಸುನಿಲ್‌ಕುಮಾರ್ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net