ತಗ್ಗು-ಗುಂಡಿ ಮುಚ್ಚುವಂತೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

oplus_0
oplus_0
Published on

ರಾಣೆಬೆನ್ನೂರ: ನಗರದಲ್ಲಿ ಮಳೆಯಿಂದ ಬಿದ್ದಿರುವ ತಗ್ಗು&ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಬಿಜೆಪಿ ನಗರ ಟಕದ ಕಾರ್ಯಕರ್ತರು ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚುವ ಮೂಲಕ ಪ್ರತಿಭಟನೆ ನಡೆಸಿದರು.

ನಗರ ಟಕದ ಅಧ್ಯಕ್ಷ ಮಂಜುನಾಥ ಕಾಟಿ ಮಾತನಾಡಿ, ನಿರಂತರ ಮಳೆಯಿಂದಾಗಿ ನಗರದಾದ್ಯಂತ ಎಲ್ಲೆಡೆ ತಗ್ಗು&ಗುಂಡಿಗಳು ಬಿದ್ದು ರಸ್ತೆಗಳು ಸಂರ್ಪೂಣ ಹಾಳಾಗಿ ಹೋಗಿವೆ. ಇದರಿಂದ ಜನತೆ ರಸ್ತೆಯಲ್ಲಿ ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಆದರೆ, ರಸ್ತೆಗಳನ್ನು ದುರಸ್ತಿಪಡಿಸಬೇಕಾದ ಅಧಿಕಾರಿಗಳು ಮಾತ್ರ ಯಾವ ಕಾಮಗಾರಿಯನ್ನು ಮಾಡುತ್ತಿಲ್ಲ.

ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವ ದುಸ್ಥಿತಿ ತಂದೊಡ್ಡಿದೆ. ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ನಗರದಲ್ಲಿ ಬಿದ್ದಿರುವ ತಗ್ಗು&ಗುಂಡಿ ಮುಚ್ಚಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರಡೆಣ್ಣನವರ, ಸದಸ್ಯರಾದ ಪ್ರಕಾಶ ಪೂಜಾರ, ಲಿಂಗರಾಜ ಕೋಡಿಹಳ್ಳಿ, ಪ್ರಮುಖರಾದ ಸಂತೋಷ ತೆವರಿ, ಡಾ. ಬಸವರಾಜ ಕೇಲಗಾರ, ಎ.ಬಿ. ಪಾಟೀಲ, ಶಿವಕುಮಾರ ಹರಕನಾಳ, ಡಾ. ನಾರಾಯಣ ಪವಾರ, ಮಾಳಪ್ಪ ಪೂಜಾರ, ಕುಬೇರಪ್ಪ ಕೊಂಡೋಜಿ, ರವಿ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net