ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ

ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ
Published on

ಹಾಸನ: ಬಿಜೆಪಿಯವರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾವನಾತ್ಮಕ ವಿಚಾರಗಳೇ ಸಿಗುತ್ತಿವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವ್ಯಂಗ್ಯವಾಡಿದರು.

ಧರ್ಮಸ್ಥಳದ ಪರವಾಗಿ ಬಿಜೆಪಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೌಜನ್ಯಾ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಿ ಅಂಥ ಹೋರಾಟ ಮಾಡಿದವರೇ ಬಿಜೆಪಿಯವರು. ಈಗ ಊಸರವಳ್ಳಿ ತರಹ ಆಡುತ್ತಿದ್ದಾರೆ. ಬಿಜೆಪಿಯವರು ಢೋಂಗಿಗಳು. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಿದ್ದಾರೆ. ಅದನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಲು ಇವರಿಗೆ ಬೇರೆ ವಿಷಯವಿಲ್ಲ. ಕಳ್ಳನಿಗೊಂದು ಪಿಳ್ಳೆ ನೇವ ಅಂತ ಈ ವಿಚಾರ ಸಿಕ್ತು ಎಂದು ಕುಟುಕಿದರು.

ಗೃಹಮಂತ್ರಿಗಳು ಅಚ್ಚುಕಟ್ಟಾದ ಹೇಳಿಕೆ ಕೊಟ್ಟಿದ್ದಾರೆ. ತನಿಖೆಯ ವರದಿ ಬರಲಿ ಅಲ್ಲಿವರೆಗೂ ಕಾಯೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net