ಆತ್ಮ ನಿರ್ಭರ ಭಾರತದ ಬಗ್ಗೆ ಜನರಿಗೆ ತಿಳಿಸಿ; ನಾಗರಾಜ

29-RNR-09
Published on

ಹಾವೇರಿ: ಆತ್ಮ ನಿರ್ಭರ ಭಾರತದ ಸಂಕಲ್ಪದ ಎಲ್ಲ ಕಾರ್ಯಕ್ರಮಗಳನ್ನು ಸವಿಸ್ತಾರವಾಗಿ ಯೋಜನಾಭದ್ದವಾಗಿ 90 ದಿನದಲ್ಲಿ ಎಲ್ಲ ಚಟುವಟಿಕೆಗಳನ್ನು ಮಾಡಿ ಜಿಲ್ಲೆಯಲ್ಲಿ ಆತ್ಮ ನಿರ್ಭರ ಭಾರತದ ಬಗ್ಗೆ ಜನ ಮುಟ್ಟುವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಅಭಿಯಾನದ ವಕ್ತಾರ ನಾಗರಾಜ ಕುಲಕಣಿರ್ ಹೇಳಿದರು.

ನಗರದ ಬಿಜೆಪಿ ಕಾರ್ಯಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಂ. ದಿನದಯಾಳ ಉಪ್ಯಾಧ್ಯಯರ ಜನ್ಮ ದಿನದಂದು ಈ ಕಾರ್ಯಕಮ ಹಮ್ಮಿಕೊಳ್ಳಲಾಗಿದೆ. ಈ ಸಂಕಲ್ಪ ಅವಧಿಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳನ್ನು ತಿಳಿಸಬೇಕು ಎಂದರು.

ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಮಾತನಾಡಿ, ಯುವಕರ ಪಾತ್ರ ಈ ಸಂಕಲ್ಪ ಅಭಿಯಾನದಲ್ಲಿ ಪ್ರಮುಖವಾದದ್ದು ಯುವಕರು ಅನೇಕ ತಂತ್ರಜ್ಞಾನಗಳ ಬಗ್ಗೆ ಚಿಂತನೆ ಮಾಡಿ ಸಮಾಜದಲ್ಲಿ ಮುನ್ನೆಲೆಗೆ ಬರಬೇಕು ಎಂದರು.

ಅಭಿಯಾನದ ಜಿಲ್ಲಾ ಪ್ರಧಾನ ಕಾರ್ಯದಶಿರ್ ನಂಜುಂಡೇಶ ಕಳ್ಳೇರ, ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಶಿವರಾಜ ಸಜ್ಜನ, ಶೋಭಾ ನಿಸ್ಸಿಮಗೌಡ್ರ, ಸಂತೋಷ ಆಲದಕಟ್ಟಿ, ಶಿವಕುಮಾರ ತಿಪ್ಪಶೆಟ್ಟಿ, ಕೃಷ್ಣಾ ಸುಣಗಾರ, ವೀವೇಕ ಇಂಗಳಗಿ ಹಾಗೂ ಎಲ್ಲ ಮಂಡಳಗಳ ಅಧ್ಯಕ್ಷರು, ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net