'ಕಂಪ್ಲೀಟ್ ಬಾಯ್ಕಾಟ್'ಗೆ ಬಿಜೆಪಿ ಶಾಸಕನ ಬಹಿರಂಗ ಕರೆ…

parvesh sing
Published on

ನವದೆಹಲಿ: ನೂರಾರು ಜನರು ನೆರೆದಿದ್ದ ಸಮಯದಲ್ಲಿ ಕ್ಯಾಮರಾ ಮುಂದೆಯೇ ಒಂದು ಸಮುದಾಯವನ್ನು ಸಂಪೂಣರ್ವಾಗಿ ನಿಷೇಧಿಸಬೇಕು ಎಂಬ ಹೇಳಿಕೆಯನ್ನು ದೆಹಲಿಯ ಬಿಜೆಪಿ ಶಾಸಕ ಪರ್ವೇಶ್ ಸಾಹಿಬ್​ ಸಿಂಗ್​ ವರ್ಮಾ ನೀಡಿದ್ದಾರೆ.

'ಅವರ ತಲೆಯನ್ನು ಹೇಗೆ ಸರಿ ಮಾಡಬೇಕು' ಎನ್ನುವ ಬಗ್ಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕರು ಮಾತನಾಡಿದ್ದಾರೆ.
ಅಲ್ಲೇ ಪ್ರತಿಜ್ಞೆಯನ್ನೂ ಮಾಡಿಸಿದ್ದಾರೆ. ಮಳೆಯ ನಡುವೆಯೂ ಕಾರ್ಯಕರ್ತರು ಅವರ ಭಾಷಣ ಕೇಳಿದ್ದಾರೆ.

'ಅವರ ತರಕಾರಿ, ಮೀನು-ಮಾಂಸಗಳ ಅಂಗಡಿಗಳು ತಲೆ ಎತ್ತುತ್ತಲೇ ಇರುತ್ತವೆ. ಆದರೆ ನಾವು ಅವರಿಂದ ಏನನ್ನೂ ಖರೀದಿಸಬೇಕಿಲ್ಲ. ಅಂಗಡಿಗೆ ಪರವಾನಗಿ ಇಲ್ಲದೇ ಹೋದಲ್ಲಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು. ಇದಕ್ಕೆ ಸಹಮತ ಇದ್ದರೆ ಕೈ ಎತ್ತಿ' ಎಂದು ಹೇಳಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುತ್ತಾ ಕಾರ್ಯಕರ್ತರು ಕೈ ಎತ್ತಿದ್ದಾರೆ.

ವರ್ಮಾರ ಭಾಷಣಕ್ಕೆ ಪರ-ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಹೈದರಾಬಾದ್ ಶಾಸಕ ಅಸದುದ್ದೀನ್ ಓವೈಸಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮುಂತಾದವರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net