ಬಿಜೆಪಿ ಸಂಸದನ ಅಣ್ಣ ಕರೊನಾಗೆ ಬಲಿ!

bjp
Published on

ಲಖನೌ: ದೇಶದಲ್ಲಿ ಕರೊನಾ ಸೋಂಕು ತೀವ್ರವಾಗಿದೆ. ಅನೇಕ ರಾಜಕೀಯ ನಾಯಕರುಗಳಿಗೂ ಸೋಂಕು ತಗುಲುತ್ತಿದ್ದು, ಆಸ್ಪತ್ರೆ ಸೇರುವಂತಾಗಿದೆ. ಕೆಲ ನಾಯಕರು ಗಂಭೀರ ಸಮಸ್ಯೆಗೆ ಒಳಗಾಗಿದ್ದು, ಅಸು ನೀಗಿರುವ ಘಟನೆಗಳು ನಡೆದಿವೆ. ಇದೀಗ ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರ ಅಣ್ಣ ಕರೊನಾಗೆ ಬಲಿಯಾಗಿದ್ದಾರೆ.

ಮೋಹನ್ ಲಾಲ್ಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕುಶಾಲ್​ ಕಿಶೋರ್ ಅವರ ಅಣ್ಣ ಮಹವೀರ್​ ಪ್ರಸಾದ್ ಮೃತ ದುರ್ವೈವಿ. ಅವರಿಗೆ 85 ವರ್ಷ ವಯಸ್ಸಾಗಿದ್ದು, ದಲಿಗಂಜ್ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಉಸಿರಾಟ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ವೆಂಟಿಲೇಟರ್​ ಹಾಕಲಾಗಿತ್ತು.

ಕೆಲ ದಿನಗಳ ಹಿಂದೆ ಕುಶಾಲ್​ ಕಿಶೋರ್​ ಅವರು ರಾಜ್ಯದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರಲ್ಲಿ ಮನವಿ ಮಾಡಿದ್ದರು. ಈ ಹಿಂದೆ ಲಖನೌನ ಶಾಸಕ ಸುರೇಶ್​ ಶ್ರೀವಾಸ್ತವ್​ ಅವರು ಕರೊನಾ ಸೋಂಕಿನಿಂದಾಗಿ ಮೃತರಾಗಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net