

ತುಮಕೂರು: ತಾನು ಸಿಎಂ ಆಗಬೇಕು, ನಮ್ಮ ಮುಂಡರೇ ಸಿಎಂ ಆಗಬೇಕು, ತಮ್ಮ ಪಕ್ಷದ ಪ್ರಮುಖ ನಾಯ ಸಿಎಂ ಗಾದಿಗೆ ಏರಬೇಕು ಎಂದು ಪ್ರತಿಯೊಬ್ಬರೂ ಹೇಳುವುದನ್ನ ಕೇಳಿದ್ದೇವೆ. ಆದರೆ ಬಿಜೆಪಿ ಎಂಎಲ್ಸಿಯೊಬ್ಬರು ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಮೊದಲು ಮೊದಲು ಖುಷಿ ಪಡೋದೇ ನಾನು... ಎಂದು ಬಹಿರಂಗವಾಗಿಯೇ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಯೋಜಿಸಿದ್ದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಶ್ರೀ ನಂಜಾವದೂತ ಸ್ವಾಮೀಜಿ ಅವರುಗಳ ಎದುರಲ್ಲಿ ಬಿಜೆಪಿ ಎಂಎಲ್ಸಿ ಎಂ.ಚಿದಾನಂದಗೌಡ ಈ ಮಾತನ್ನು ಹೇಳಿದ್ದಾರೆ.
ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು. ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದರೆ ಮೊದಲು ಸಂತೋಷ ಪಡೋದು ನಾನೇ... ಅ ಖುಷಿಯಲ್ಲಿ ನಾನೂ ಒಬ್ಬ. ಯಾರೇ ಸಿಎಂ ಆದ್ರೂ ನಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.