BJP ಉಳಿಯಬೇಕಾದ್ರೆ ಸಾವಿರಾರು ಕೋಟಿ ಲೂಟಿ ಮಾಡಿರುವವರನ್ನು ಮೊದಲು ಕೆಳಗಿಳಿಸಿ: ಬಸನಗೌಡ ಪಾಟೀಲ್​ ಯತ್ನಾಳ್

Yatnal Vijayendra
Published on

ವಿಜಯಪುರ: ಕರ್ನಾಟಕದಲ್ಲಿ ಬಿಜೆಪಿ (BJP) ಉಳಿಯಬೇಕಾದ್ರೆ ರಾಜ್ಯಾಧ್ಯಕ್ಷನ ಸ್ಥಾನದಿಂದ ವಿಜಯೇಂದ್ರನನ್ನು (Vijayendra) ಮೊದಲು ಕೆಳಗಿಳಿಸಬೇಕು. ಅವರನ್ನ ಯಾವುದೇ ವೇದಿಕೆಗಳಲ್ಲಿ ಕೂರಿಸಬಾರದು ಎಂದು ಬಿಜೆಪಿ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಈ ಕುರಿತು ಮಾತನಾಡಿದ ಯತ್ನಾಳ್​, ವಿಜಯೇಂದ್ರ ನನ್ನನ್ನು ಸ್ಟಾರ್ ಮಾಡುವ ಅವಶ್ಯಕತೆಯಿಲ್ಲ. ಈ ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ನೀವು ಹೀರೋ ಆಗಬೇಕು ಅಂದರೆ ಖರ್ಚು ಮಾಡಿ. ಬಿಜೆಪಿ (BJP) ಕರ್ನಾಟಕ ಎಕ್ಸ್​ ಖಾತೆಯನ್ನು ಬಿವೈವಿ ಕರ್ನಾಟಕ ಎಂದು ಮಾಡಿದರೆ ಒಳ್ಳೆಯದು. ಯಾಕಂದರೆ ಅದರಲ್ಲಿ ಯಡಿಯೂರಪ್ಪನವರ ಗುಣಗಾನ ಬಿಟ್ಟರೆ ಏನು ಇಲ್ಲ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಮಂತ್ರಿ ಆಗು ಎಂದು ಹೇಳಿದರು. ಆದರೆ, ನಾನು ಮಂತ್ರಿ ಆಗಲಿಲ್ಲ.  ಅವರು ಸಿಎಂ ಇದ್ದಾಗ ಸಾಕಷ್ಟು 1,000 ಕೋಟಿ ರೂ. ಹಣ ತಿಂದಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮಂಡಲದಲ್ಲಿ ನಾನು ಇರುವುದಿಲ್ಲ ಎಂದು ಮಂತ್ರಿ ಆಫರ್​ ತಿರಸ್ಕರಿಸಿದ್ದೆ. ಪ್ರತಿ ನಿತ್ಯ ಅಪ್ಪ, ಮಗ ನಡ್ಡಾ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ತೆಗೆಯಿರಿ. ವಿಜಯೇಂದ್ರನನ್ನು ಸಿಎಂ ಮಾಡಿ ಎಂದು ಗೋಳಾಡುತ್ತಾರೆ ಎಂದು ಬಿಜೆಪಿ (BJP) ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net