ಈ ಶಾಸಕ ತನ್ನ ಕ್ಷೇತ್ರದ ಜನರಿಗೆ ಕೊಟ್ಟ ಎಚ್ಚರಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ; ಪ್ರಶ್ನಿಸಿದರೆ 'ಹೌದು, ಹೇಳಿದೆ..ಅದನ್ಯಾಕೆ ದೊಡ್ಡದು ಮಾಡುತ್ತೀರಿ'? ಎಂದ್ರು

BJP MLA28 april 20
Published on

ಲಖನೌ: ಉತ್ತರಪ್ರದೇಶದ ದಿಯೋರಿಯಾದ ಬಿಜೆಪಿ ಶಾಸಕ ಸುರೇಶ್​ ತಿವಾರಿ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ದಿಯೋರಿಯಾದ ಬರ್ಹಾಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಶ್​ ತಿವಾರಿಯವರು ತಮ್ಮ ಕ್ಷೇತ್ರದ ಜನರಿಗೆ ವಾರ್ನ್​ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಯಾವ ಕಾರಣಕ್ಕೂ ಮುಸ್ಲಿಂ ವ್ಯಾಪಾರಿಗಳ ಬಳಿ ತರಕಾರಿ ಖರೀದಿ ಮಾಡಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದ್ದರು. ಅದು ಎಲ್ಲೆಡೆ ವೈರಲ್ ಆಗುತ್ತಿದ್ದಂತೇ ವಿವಾದ ಸೃಷ್ಟಿಯಾಗಿತ್ತು. ಶಾಸಕರನ್ನು ಅನೇಕರು ಟೀಕೆ ಮಾಡಿದ್ದಾರೆ.

ಇದೊಂದು 14 ಸೆಕೆಂಡ್​ಗಳ ವಿಡಿಯೋ ಆಗಿದ್ದು, ಅದರಲ್ಲಿ ಸುರೇಶ್ ತಿವಾರಿ ಹಿಂದಿಯಲ್ಲಿ ತಮ್ಮ ಕ್ಷೇತ್ರದ ಜನರೊಂದಿಗೆ ಮಾತನಾಡುತ್ತಿದ್ದಾರೆ. ಒಂದು ವಿಷಯವನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳಿ. ನಿಮಗೆಲ್ಲರಿಗೂ ಇದನ್ನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ. ಯಾವ ಕಾರಣಕ್ಕೂ ತರಕಾರಿಗಳನ್ನು ಮುಸ್ಲಿಂ ವ್ಯಾಪಾರಿಗಳಿಂದ ಖರೀದಿ ಮಾಡಬೇಡಿ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಾಧ್ಯಮದವರು ಅವರನ್ನು ಪ್ರಶ್ನೆ ಮಾಡಿದ್ದಾರೆ. ತಾವು ಕಳೆದವಾರ ಈ ಮಾತುಗಳನ್ನು ಆಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಯಾಕೆ ಅದನ್ನೇ ದೊಡ್ಡದು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಾನು ನನ್ನ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. 10-12 ಜನರೊಂದಿಗೆ ಮಾತನಾಡುತ್ತಿದ್ದೆ. ಲಾಕ್​ಡೌನ್​ ಬಗ್ಗೆ ಮಾತನಾಡಲು ಶುರು ಮಾಡಿದೆವು. ಆಗ ನಾನು ಅವರಿಗೆ ಎಚ್ಚರಿಕೆ ನೀಡಿದೆ. ಮುಸ್ಲಿಮರು ತರಕಾರಿ, ಹಣ್ಣುಗಳ ಮೇಲೆ ಉಗುಳುತ್ತಿದ್ದಾರೆ. ಹಾಗಾಗಿ ಖರೀದಿ ಮಾಡಬೇಡಿ ಎಂದಿದ್ದೇನೆ ಎಂದು ಸುರೇಶ್​ ತಿವಾರಿ ಹೇಳಿದ್ದಾರೆ.
ಏನು ಮಾಡಬೇಕು ಎಂದು ಜನರೇ ನನ್ನ ಬಳಿ ಕೇಳುತ್ತಾರೆ. ಒಬ್ಬ ಶಾಸಕನಾಗಿ ನಾನೇನು ಹೇಳಬೇಕೋ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಅದನ್ನೇ ಯಾಕೆ ದೊಡ್ಡ ವಿಷಯವನ್ನಾಗಿ ಬಿಂಬಿಸುತ್ತೀದ್ದೀರಿ ಎಂದು ಪ್ರಶ್ನಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net