ಭಿಕ್ಷೆ ಬೇಡುವುದು ಜನರ ಅಭ್ಯಾಸ ಎಂದ ಬಿಜೆಪಿ ಸಚಿವ

7-67c49f9548185
Published on

ಭೋಪಾಲ್: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರು ಸಲ್ಲಿಸುವ ಅಹವಾಲುಗಳು ‘ಭಿಕ್ಷೆಗೆ’ ಸಮನಾದುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ಹೇಳಿರುವುದು ಭಾರಿ ವಿವಾದವನ್ನು ಹುಟ್ಟುಹಾಕಿದೆ.

ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಶನಿವಾರ ವೀರಾಂಗನೆ ರಾಣಿ ಆವಂತಿಬಾಯಿ ಲೋಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಪಟೇಲ್ ಮಾಡಿದ್ದ ಈ ಟಿಪ್ಪಣಿಯನ್ನು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಕಟುವಾಗಿ ಖಂಡಿಸಿವೆ. ‘ಜನರು ಸರ್ಕಾರದಿಂದ ಭಿಕ್ಷೆ ಕೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ನಾಯಕರ ಕೈಗೆ ಬುಟ್ಟಿಗಟ್ಟಲೆ ಮನವಿಗಳನ್ನು ಕೊಡುತ್ತಾರೆ. ವೇದಿಕೆ ಮೇಲೆ ಹಾರ ಹಾಕಿ ಅವರ ಕೈಗೆ ಮನವಿ ಪತ್ರ ಅರ್ಪಿಸುತ್ತಾರೆ’ ಎಂದಿದ್ದ ಪಟೇಲ್, ಕೇಳುವ ಬದಲು ಕೊಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದ್ದರು. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net