ಬಿಜೆಪಿ ಮುಖಂಡನ ಪತ್ನಿಯ ಕಾಲಿನ ಮೇಲೆ ಹರಿದ ಆ್ಯಂಬುಲೆನ್ಸ್ ; ತುಂಡಾಗಿ ಬಿದ್ದ ಕಿರುಬೆರಳು

ambulance
Published on

ದಾವಣಗೆರೆ: ಗೃಹಿಣಿ ಕಾಲಿನ ಮೇಲೆ ಆ್ಯಂಬುಲೆನ್ಸ್ ಹರಿದು ಕಾಲಿನ ಬೆರಳು ತುಂಡಾದ ಘಟನೆ ದಾವಣಗೆರೆ ನಗರದ ಬಾಪುಜಿ ಖಾಸಗಿ ಆಸ್ಪತ್ರೆ ಬಳಿ ನಡೆದಿದೆ.

ದಾವಣಗೆರೆ ನಗರದ ಪೂರ್ಣಿಮಾ ಎಂಬ ಗೃಹಿಣಿ ಕಾಲಿನ ಮೇಲೆ ಆ್ಯಂಬುಲೆನ್ಸ್ ಹರಿದಿದೆ. ಪೂರ್ಣಿಮಾ ದಾವಣಗೆರೆ ಬಿಜೆಪಿ ಮುಖಂಡ ಕಂಠಿ ಎಂಬುವವರ ಪತ್ನಿ. ಆ್ಯಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ಮಹಿಳೆ ಬೆರಳಿಗೆ ಗಾಯವಾಗಿದೆ.

ಆ್ಯಂಬುಲೆನ್ಸ್ ಡ್ರೈವರ್ ಹ್ಯಾಂಡ್ ಬ್ರೇಕ್ ಹಾಕದೆ ವಾಹನ ನಿಲ್ಲಿಸಿದ್ದರ ಪರಿಣಾಮ ಈ ಘಟನೆ ನಡೆದಿದೆ. ಇಳಿಜಾರು ಇದ್ದಿದ್ದರಿಂದ ರೀವರ್ಸ್ ನಲ್ಲಿ ಬಂದಿರೋ ಆಂಬುಲೆನ್ಸ್, ವಾಹನದ ಹಿಂದೆ ಇದ್ದ ಕಂಠಿ ಮತ್ತು ಅವರ ಪುತ್ರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಡಿವೈಡರ್ ಮತ್ತು ಆ್ಯಂಬುಲೆನ್ಸ್ ವಾಹನದ ಮಧ್ಯ ಪೂರ್ಣಿಮಾ ಸಿಲುಕಿ ತೀವ್ರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪೂರ್ಣಿಮಾ ಪಾರಾಗಿದ್ದಾರೆ.

ಪೂರ್ಣಿಮಾಗೆ ಬಾಪೂಜಿ ಆಸ್ಪತ್ರೆಯಲ್ಲೆ ಪ್ರಥಮ ಚಿಕಿತ್ಸೆ, ನಂತರ ಎಸ್ ಎಸ್ ಹೈಟೆಕ್ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆಯುತಿದ್ದಂತೆ ಆ್ಯಂಬುಲೆನ್ಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net