ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ

atmaram
Published on

ಲಖನೌ: ಉತ್ತರಪ್ರದೇಶದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆತ್ಮಾರಾಮ್​ ತೋಮರ್​ ಅವರ ಕೊಲೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಯುಪಿಯ ಭಾಗಪತ್​ನ ನಿವಾಸಿ ತೋಮರ್​ ಅವರ ಮೃತದೇಹವು ಅವರ ಮನೆಯಲ್ಲಿ ಲಭಿಸಿದೆ. ಅವರನ್ನು ಟವೆಲ್​ನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಿಸಿಟಿವಿ ಫೂಟೇಜ್​ನಲ್ಲಿ ಇಬ್ಬರು ಪುರುಷರು ಮನೆಯನ್ನು ಪ್ರವೇಶಿಸಿರುವುದು ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಭಾಗಪತ್​ ಎಸ್ಪಿ ನೀರಜ್​ ಜಾದೌನ್​ ಹೇಳಿದ್ದಾರೆ.

ಮೃತ ಆತ್ಮಾರಾಮ್​ ತೋಮರ್​ ಅವರ ಪುತ್ರ ಸತ್ಯಪ್ರತಾಪ್​ ಅವರು, ತಮ್ಮ ತಂದೆ ಮತ್ತು ಮಾವನ ನಡುವೆ ಹಣದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಇದೇ ಅವರ ಕೊಲೆಗೆ ಕಾರಣವಾಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net