

ಮೇದಿನಿಪುರ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಬಿಜೆಪಿ ನಾಯಕ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರದ ಬಲ್ಪೈ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಜುಲೈ 8ರಂದು ರಸ್ತೆಗೆ ಇಳಿಯಲ್ಲ ಸರ್ಕಾರಿ ಆ್ಯಂಬುಲೆನ್ಸ್! ಪ್ರತಿಭಟನೆಗೆ ಇಳಿತಾರಾ ಸಿಬ್ಬಂದಿ?
ಸ್ಥಳೀಯ ಬಿಜೆಪಿ ಬೂತ್ ಅಧ್ಯಕ್ಷ ದೀಪಕ್ ಸಮಂತಾ ಮೃತ ವ್ಯಕ್ತಿಯಾಗಿದ್ದು, ಸ್ವಗೃಹದಲ್ಲೇ ಸೀಲಿಂಗ್‌ನಿಂದ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆ ಪ್ರಕರಣವೇ ಎಂಬುದರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸರು ಈ ಕುರಿತು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 225 ‘ನಮ್ಮ ಕ್ಲಿನಿಕ್’ ಆರಂಭ; ವೈದ್ಯರ ಕೊರತೆಗೂ ಪರಿಹಾರ ಹುಡುಕಿದ ಬಿಬಿಎಂಪಿ
ಘಟಾಲ್‌ನ ಹಿರಿಯ ಬಿಜೆಪಿ ನಾಯಕ ತನ್ಮಯ್ ದಾಸ್, ಜುಲೈ 8ರಂದು ನಡೆಯುವ ಪಂಚಾಯತ್ ಚುನಾವಣೆಯ ಮೊದಲು ತೃಣಮೂಲ ಕಾಂಗ್ರೆಸ್ ಸೇರುವಂತೆ ದೀಪಕ್ ಮೇಲೆ ಒತ್ತಡ ಹೇರಲಾಗಿತ್ತು. ಈ ಕುರಿತು ಆತ ಮತ್ತು ಅವರ ಕುಟುಂಬ ಪೊಲೀಸರನ್ನು ಸಂಪರ್ಕಿಸಿದ್ದರು. ಅಲ್ಲದೇ, ಈ ಹಿಂದೆ ದೀಪಕ್ ಪತ್ನಿಗೆ ಬಿಳಿ ಸೀರೆ ಮತ್ತು ಬಿಳಿ ಹೂವುಗಳನ್ನು ಕಳುಹಿಸಲಾಗಿತ್ತು. ಇದು ಕೊಲೆ ಬೆದರಿಕೆಗೆ ಸಮಾನವಾಗಿದೆ ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್)