ಕಾಂಗ್ರೆಸ್‌ನಿಂದ ಪೊಳ್ಳು ಭರವಸೆ

jds-bjp sri meeting
ಶೃಂಗೇರಿ ತಾಲೂಕಿನ ಮೇಲ್ಗಟ್ಟದಲ್ಲಿ ಮೈತ್ರಿ ಅಭ್ಯರ್ಥಿ ಪರ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೆಂಕಪ್ಪಚಾರ್ಯ ಮಾತನಾಡಿದರು. ಸುಮನಾ, ಸತೀಶ್, ದಿನೇಶ್ ಇದ್ದರು.
Published on

ಶೃಂಗೇರಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದೆ. ನುಡಿದಂತೆ ಯಾವುದನ್ನೂ ಮಾಡದೆ ಪೊಳ್ಳು ಭರವಸೆ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೆಂಕಪ್ಪಚಾರ್ಯ ಹೇಳಿದರು.
ಮರ್ಕಲ್ ಗ್ರಾಪಂನ ಮೇಲ್ಗಟ್ಟದಲ್ಲಿ ಮಂಗಳವಾರ ಬಿಜೆಪಿ, ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮತಯಾಚಿಸಿ ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯವನ್ನು ದಿವಾಳಿ ಮಾಡಿರುವ ಕಾಂಗ್ರೆಸ್ ಮತದಾರರಿಗೆ ಚೊಂಬು ನೀಡಿದೆ. ಪಿಎಂ ನರೇಂದ್ರ ಮೋದಿ ದೇಶವನ್ನು ಮುನ್ನಡೆಸಿ, ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನ ದೊರಕುವಂತೆ ಮಾಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಸರಳ, ಸಜ್ಜನ ರಾಜಕಾರಣಿ. ದೇಶದ ಭವಿಷ್ಯಕ್ಕಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದಿನೇಶ್ ಆಚಾರ್ಯ, ಶೈಲೇಂದ್ರ, ಸುಮನಾ ಶಿವಣ್ಣಚಾರ್ಯ, ಅಚ್ಚುತಾಚಾರ್ಯ, ಚನ್ನೇಗುಡ್ಡೆ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net