ಜೆಡಿಎಸ್ ಜತೆ ಬಿಜೆಪಿ ಮೈತ್ರಿ; ಮಾತುಕತೆ ಶುರುವಾಗಿಲ್ಲ ಎಂದ ಬಿಎಸ್‌ವೈ

Yadiyurappa
Published on

ಬೆಂಗಳೂರು: ಲೋಕಸಭೆ ಚುನಾವಣೆ ಪೂರ್ವ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಇನ್ನೂ ಸ್ಪಷ್ಟ ರೂಪ ಪಡೆದುಕೊಂಡಿಲ್ಲ, ಇನ್ನೂ ಮಾತುಕತೆ ಶುರುವಾಗಿಲ್ಲ. ಬಿಜೆಪಿ ವರಿಷ್ಠರು ಬ್ಯುಸಿಯಾಗಿರುವ ಕಾರಣ ಬಹುಶಃ 2-3 ದಿನಗಳ ನಂತರ ಮಾತುಕತೆ ಶುರುವಾಗಬಹುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಹೊಂದಾಣಿಕೆ ಕುರಿತು ಈ ಮೊದಲು ಹೇಳಿದ್ದನ್ನೇ ಈಗಲೂ ರೂಪ ಪಡೆದುಕೊಂಡಿಲ್ಲ ಎಂದು ಪುನರುಚ್ಚರಿಸುತ್ತಿರುವೆ. ಮಾತುಕತೆಗಳ ಏನಿದ್ದರೂ ವರಿಷ್ಠರ ಹಂತದಲ್ಲಿ ನಡೆಯಲಿದ್ದು, ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದರು.

ಮೋದಿಯವರು ಪೂರ್ವನಿಗದಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ವರಿಷ್ಠರ ಹಂತದಲ್ಲೇ ಎಲ್ಲವೂ ತೀರ್ಮಾನವಾಗಲಿದೆ. ಜೆಡಿಎಸ್, ಬಿಜೆಪಿಯ ಬೀ ಟೀಮ್ ಎನ್ನುವುದು ನಿಜವಾಯಿತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತಾಡಲು ಬಯಸುವುದಿಲ್ಲ ಎಂದು ಬಿಎಸ್‌ವೈ ಉತ್ತರಿಸಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net