

Udayanidhi Stalin: ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಅದರ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಕಂಡುಕೊಂಡಂತೆ, ಬಿಜೆಪಿ ಹೊಸ 'ಗುಲಾಮರನ್ನು' ಹುಡುಕಲು ಪ್ರಯತ್ನಿಸುತ್ತಿದೆ ಎಂದು ಬುಧವಾರ(ಅ. 08) ಡಿಸಿಎಂ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ತಿರುಚ್ಚಿಯಲ್ಲಿ ಡಿಎಂಕೆ ಸಭೆ ಉದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿಯವರಿಗೆ ಗುಲಾಮರು ಸಿಗುತ್ತಾರೆ. ಎಷ್ಟೇ ಗುಲಾಮರು ಬಂದರೂ, ಡಿಎಂಕೆ ಇಲ್ಲಿ ಇರುವವರೆಗೆ ಅವರು ತಮಿಳುನಾಡಿಗೆ ನುಸುಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚುನಾವಣಾ ಪ್ರಚಾರ ಆರಂಭವಾಗುತ್ತಿದ್ದಂತೆ, ರಾಜ್ಯಪಾಲ ಆರ್.ಎನ್. ರವಿ ಕೂಡ ತಮ್ಮದೇ ಆದ ಅಭಿಯಾನ ಆರಂಭಿಸಿದ್ದಾರೆ. ತಮಿಳುನಾಡು ಯಾರೊಂದಿಗೆ ಹೋರಾಡುತ್ತಿದೆ ಎಂದು ಅವರು ಕೇಳುತ್ತಾರೆ. ನಾಲ್ಕು ವರ್ಷಗಳಿಂದ, ತಮಿಳುನಾಡು ನಿಮ್ಮೊಂದಿಗೆ ಹೋರಾಡುತ್ತಿದೆ. ಎಡಪ್ಪಾಡಿ ಪಳನಿಸ್ವಾಮಿಯಂತೆ ಎಲ್ಲರೂ ಗುಲಾಮರಾಗುತ್ತಾರೆ ಎಂದು ರಾಜ್ಯಪಾಲರು ಭಾವಿಸುತ್ತಾರೆ ಎಂದಿದ್ದಾರೆ.
ಹಿಂದೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು, ಮತ್ತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾರುಗಳನ್ನು ಬದಲಾಯಿಸುವುದು ಮತ್ತು ಕಾಲುಗಳನ್ನು ಬದಲಾಯಿಸುವುದು ಎಡಪ್ಪಾಡಿ ಪಳನಿಸ್ವಾಮಿಗೆ ಹೊಸದೇನಲ್ಲ ಎಂದು ಕಿಚಾಯಿಸಿದರು. (ಏಜೆನ್ಸೀಸ್)