

ಕೋಲಾರ: ಡೋಂಗಿತನವೇ ಬಿಜೆಪಿಯವರ ನಿಜವಾದ ಬಣ್ಣ, ಜಾತಿ ಸಮೀೆ ವಿಚಾರದಲ್ಲಿ ರಾಜಕೀಯ ಮೇಲಾಟಕ್ಕೆ ಇನ್ನೊಂದು ಉದಾಹರಣೆ ಬೇಕಾ? ಬಿಜೆಪಿ ಎಂದರೆ ಭಾರತೀಯ ಜುಮ್ಲಾ ಪಾರ್ಟಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮೂದಲಿಸಿದರು.
ತಾಲೂಕಿನ ಕುರ್ಕಿ ಗ್ರಾಮದಲ್ಲಿ ದೊಡ್ಡ ದ್ಯಾವರ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ ಆಯೋಗವನ್ನು ರಚನೆ ಮಾಡಿದ್ದು ಬಿಜೆಪಿಯವರೇ. ಆದರೆ, ಈಗ ಆರೋಪ ಮಾಡುವ ಮೂಲಕ ಡೋಂಗಿತನ ಪ್ರದರ್ಶಿಸುತ್ತಿದ್ದಾರೆ ಎಂದರು.
ವಿರೋಧ ಪಕ್ಷದವರಿಗೆ ಸದ್ಯಕ್ಕೆ ಮಾತನಾಡಲು ಬೇರೆ ವಿಚಾರ ಸಿಗುತ್ತಿಲ್ಲ, ಸಮೀೆಯು ಸಾಮಾಜಿಕ, ಆರ್ಥಿಕ ಎಂದು ಸ್ಪಷ್ಟೀಕರಣ ಕೊಟ್ಟಿದ್ದರೂ ಬಿಜೆಪಿಯವರು ಮೊಂಡುವಾದ ಮಾಡುತ್ತಿದ್ದಾರೆ. ಆಯೋಗದ ಅಧ್ಯಕ್ಷ, ಸದಸ್ಯರ ನೇಮಕ ಮಾಡಿರುವುದು, ಸದಸ್ಯರಾಗಿರುವವರು ಬಿಜೆಪಿಯವರೇ. ಸಹಿ ಹಾಕಿ ವರದಿ ಸಲ್ಲಿಸಿರುವುದು ಸಹ ಬಿಜೆಪಿ, ನೇಮಕ ಮಾಡಿರುವ ಅಧ್ಯಕ್ಷರು, ಸದಸ್ಯರು. ಈಗ ಟೀಕೆ ಮಾಡುತ್ತಾರೆ ಎಂದರೆ ಡೋಂಗಿತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು.