ಬಿಜೆಪಿ ರೌಡಿ ಶೀಟರ್‌ಗಳನ್ನು ವಿಜೃಂಭಿಸುತ್ತಿದೆ: ಎಂ.ಬಿ.ಪಾಟೀಲ ಟೀಕೆ|criticizes

MB PATIL
Published on

ಬೆಂಗಳೂರು: ಬಿಜೆಪಿ ರೌಡಿ ಶೀಟರ್‌ಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿದೆ(BJP is promoting rowdy sheeters: M.B. Patil criticizes) ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ( M.B. Patil) ಆರೋಪ ಮಾಡಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ರಿಮಿನಲ್ ಎನ್ನೋದೇ ಒಂದು ಬೇರೆ ಜಾತಿ ಅದು. ಎಲ್ಲವನ್ನು ಹಿಂದುತ್ವಕ್ಕೆ ಹಚ್ಚುವ ಕೆಲಸ ಆಗಬಾರದು ಎಂದರು.

ಮಂಗಳೂರಿನ ಸುಹಾಸ್ ಶೆಟ್ಟಿ ಮೇಲೆ ಕೇಸ್ ಗಳಿದ್ದವು. ಕ್ರಿಮಿನಲ್ಗಳು ಇರುತ್ತಾರೆ, ರೌಡಿ ಶೀಟರ್ಸ್ ಇರುತ್ತಾರೆ. ನಮ್ಮ ಜಿಲ್ಲೆಯಲ್ಲಿ ಭೀಮಾ ತೀರದಲ್ಲಿ ಬೇಕಾದಷ್ಟು ಮರ್ಡರ್‌ಗಳಾಗುತ್ತವೆ. ಅವೆಲ್ಲವನ್ನೂ ನಾವು ಒಯ್ದು ಒಂದು ಪಕ್ಷಕ್ಕೆ ಸೇರಿಸಲು ಆಗುತ್ತದಾ? ಮೊನ್ನೆ ವಿಜಯಪುರದಲ್ಲಿ ಶೂಟ್ ಔಟ್ ಆಗಲಿಲ್ವಾ? ಅದನ್ನು ಒಯ್ದು ಹಿಂದೂ-ಮುಸ್ಲಿಂ ಎಂಬ ಹಣೆಪಟ್ಟಿ ಅಂಟಿಸಬಹುದೆ? ಎಂದ ಪ್ರಶ್ನಿಸಿದರು.

ಕ್ರಿಮಿನಲ್‌ಗಳು ಯಾವುದೇ ಜಾತಿ ಇರಲಿ, ಯಾವುದೇ ಧರ್ಮ ಇರಲಿ, ಯಾವುದೇ ಪಕ್ಷಕ್ಕೆ ಅಂಟಿಕೊಂಡಿರಲಿ ಅವರು ಕ್ರಿಮಿನಲ್ಸ್, ಕ್ರಿಮಿನಲ್ ಅನ್ನೋದೇ ಒಂದು ಜಾತಿ ಅದು ಹಿಂದೂನೂ ಅಲ್ಲ, ಮುಸ್ಲೀಮೂ ಅಲ್ಲ, ಬೌದ್ಧರೂ ಅಲ್ಲ, ಸಿಖ್ಖರೂ ಅಲ್ಲ. ಕ್ರಿಮಿನಲ್ ಎನ್ನೋದೇ ಒಂದು ಬೇರೆ ಜಾತಿ ಅದು. ರೌಡಿ ಶೀಟರ್‌ನ್ನು ವಿಜೃಂಭಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಮಂಗಳೂರು ಭಾಗದ ಜನರಿಗೆ ಗೊತ್ತಿಲ್ವಾ ಇದೆಲ್ಲಾ? ಗೊತ್ತಿದೆ, ಆದರೂ ಆ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಅಸಹ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net