ತೀರ್ಥಹಳ್ಳಿಯಲ್ಲಿ ಅಭಿವೃದ್ಧಿಗೆ ಬಿಜೆಪಿ ಅಡ್ಡಿ

tth
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ
Published on

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿಯಲ್ಲಿ ಜನಪರ ಕಾರ್ಯ ನಿರ್ವಹಣೆಗೆ ಬಿಜೆಪಿ ಸದಸ್ಯರು ಅಡ್ಡಗಾಲು ಹಾಕುತ್ತಿದ್ದಾರೆ. ಅಧಿಕಾರಿಗಳನ್ನು ಬೆದರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಆರೋಪಿಸಿದರು.

ಪಪಂ ಆಡಳಿತದ ವಿರುದ್ಧ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆ ಹಾಸ್ಯಾಸ್ಪದ. ನಾಲ್ಕು ಅವಧಿಗೂ ಹೆಚ್ಚಿನ ಕಾಲ ಪಪಂ ಆಡಳಿತ ನಡೆಸಿರುವ ಬಿಜೆಪಿ ಮಾಡಿರುವ ಅಭಿವೃದ್ಧಿಗಿಂತಲೂ ಮಿಗಿಲಾಗಿ ಕಳೆದ ಮೂರು ವರ್ಷಗಳಲ್ಲಿ ನಾವು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಜನಮೆಚ್ಚುವಂತೆ ಕಾರ್ಯನಿರ್ವಹಿಸಿದ್ದೇವೆ. ಜನಪರ ಆಡಳಿತವನ್ನು ಸಹಿಸದೆ ರಾಜಕೀಯ ದುರುದ್ದೇಶದಿಂದ ಮಾಡಿರುವ ಪ್ರತಿಭಟನೆ ಜನವಿರೋಧಿಯೂ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಳೆಗಾಲ ಮತ್ತಿತರ ಸಂದರ್ಭಗಳಲ್ಲಿ ಪಟ್ಟಣದ ಜನರ ಹಿತದೃಷ್ಟಿಯಿಂದ ತುರ್ತಾಗಿದ್ದ ಕಾಮಗಾರಿಗಳನ್ನು ಟೆಂಡರ್ ಕರೆಯದೆ ಕೆಲಸ ಮಾಡಿದ್ದು, ನಂತರದಲ್ಲಿ ಕೌನ್ಸಿಲ್ ಒಪ್ಪಿಗೆ ಪಡೆದಿದ್ದೇವೆ. ಯಾವುದೇ ಕೆಲಸಗಳನ್ನೂ ನಿಯಮ ಉಲ್ಲಂಸಿ ಮಾಡಿಲ್ಲ. ಹಿರಿಯ ಸದಸ್ಯರಾಗಿ ಉತ್ತಮ ಕಾರ್ಯಗಳಿಗೆ ಬೆಂಬಲ ನೀಡಬೇಕಾದವರು ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲೇಬಾರದು ಎಂಬ ಭಾವನೆ ಹೊಂದಿದ್ದಾರೆ. ಕೆಲಸ ನಿರ್ವಹಿಸಲು ಬರುವ ಗುತ್ತಿಗೆದಾರರ ಮೇಲೂ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದರು.

ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೃ ಬಿ.ಗಣಪತಿ, ಸದಸ್ಯರಾದ ಸುಶೀಲಾ ಶೆಟ್ಟಿ, ಶಬನಂ, ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ, ವಿಲಿಯಂ ಮಾರ್ಟಿಸ್, ಡಾ. ಅನಿಲ್, ನಾಮನಿರ್ದೆಶಿತ ಸದಸ್ಯ ರಾಘವೇಂದ್ರ ಶೆಟ್ಟಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net