19ರಿಂದ ಜನಸ್ವರಾಜ್ ಯಾತ್ರೆಗೆ ಬಿಜೆಪಿ ಸಜ್ಜು, ನಾಲ್ಕು ತಂಡ ರಚನೆ..

election-BJP
Published on

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಂಘಟನಾ ಪ್ರವಾಸ ಕೈಗೊಳ್ಳುವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುನರುಚ್ಚರಿಸಿದ ಬೆನ್ನಲ್ಲೇ ಪಕ್ಷದ ‘ಜನ ಸ್ವರಾಜ್ ಯಾತ್ರೆ’ ಕಾರ್ಯಯೋಜನೆ ಸಿದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು, ಸಾಧನೆ ಕುರಿತು ವ್ಯಾಪಕ ಪ್ರಚಾರದ ಮೂಲಕ ಜನರಿಗೆ ಮಾಹಿತಿ ನೀಡುವುದು. ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಹುರುಪು ತುಂಬಿ, ಸಂಘಟನೆ ಬಲವರ್ಧನೆಗಾಗಿ ಈ ಯಾತ್ರೆ ಆಯೋಜಿಸಲಾಗಿದೆ.

4 ಪ್ರತ್ಯೇಕ ತಂಡ ರಚಿಸಲಾಗಿದ್ದು, ನ.19 ರಿಂದ 23ರವರೆಗೆ ಈ ತಂಡಗಳು ರಾಜ್ಯ ಪ್ರವಾಸ ಕೈಗೊಳ್ಳಲಿವೆ. ಪ್ರತಿ ದಿನ ತಲಾ ಎರಡು ಜಿಲ್ಲೆಗಳಲ್ಲಿ ಯಾತ್ರೆ, ಸಂಘಟನಾ ಸಮಾವೇಶ ನಡೆಸಲಿವೆ. ಯಾತ್ರೆ, ಸಮಾವೇಶ ಪಟ್ಟಿಯಲ್ಲಿ ಬೆಂ.ನಗರ ಜಿಲ್ಲೆ ಸೇರಿಸಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಸಂಪುಟದ ಹಲವರು ಈ ಪ್ರವಾಸದ ಭಾಗವಾಗಿಲ್ಲ.

ತಂಡ-1: ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಶಾಸಕರಾದ ರಾಜೂಗೌಡ, ಎನ್.ಮಹೇಶ್, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಪ್ರತಾಪ್ ಸಿಂಹ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು-ಸಂಚಾಲಕ, ಕಾರ್ಯದರ್ಶಿ ಎಸ್.ಕೇಶವ ಪ್ರಸಾದ್- ಸಹ ಸಂಚಾಲಕ.

ಸಮಾವೇಶ: ನ.19ರ ಬೆ.11ಕ್ಕೆ ಕೊಪ್ಪಳ, ಮ.3ಕ್ಕೆ ಬಳ್ಳಾರಿ. 20ರ ಬೆ.11ಕ್ಕೆ ರಾಯಚೂರು, ಮ.3ಕ್ಕೆ ಯಾದಗಿರಿ, 21ರ ಬೆ.11ಕ್ಕೆ ಕಲಬುರಗಿ ಮತ್ತು ಮ.3ಕ್ಕೆ ಬೀದರ್.

ತಂಡ-2: ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತ ಕುಮಾರ್, ಎಂ.ಬಿ.ನಂದೀಶ್. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್- ಸಂಚಾಲಕ, ಕಾರ್ಯದರ್ಶಿ ಕೆ.ಎಸ್. ನವೀನ್- ಸಹ ಸಂಚಾಲಕ

ಸಮಾವೇಶ: ನ.19ರ ಬೆ.11ಕ್ಕೆ ಉತ್ತರಕನ್ನಡ, ಮ.3ಕ್ಕೆ ಹಾವೇರಿ. 20ರ ಬೆ.11ಕ್ಕೆ ಧಾರವಾಡ, ಮ.3ಕ್ಕೆ ಗದಗ. 21ರ ಬೆ.11ಕ್ಕೆ ಬಾಗಲಕೋಟೆ, ಮ.3ಕ್ಕೆ ವಿಜಯಪುರ. 22ರ ಬೆ.11ಕ್ಕೆ ಚಿಕ್ಕೋಡಿ ಮತ್ತು ಮ.3ಕ್ಕೆ ಬೆಳಗಾವಿ.

ತಂಡ-3: ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಆರ್.ಅಶೋಕ್, ಎಸ್.ಟಿ. ಸೋಮಶೇಖರ್, ಹಾಲಪ್ಪ ಆಚಾರ್, ಎಸ್.ಅಂಗಾರ, ಶಾಸಕ ಅರವಿಂದ ಲಿಂಬಾವಳಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ. ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗೆ ಸಂಚಾಲಕ ಮತ್ತು ಸಹ ಸಂಚಾಲಕ ಜವಾಬ್ದಾರಿ.

ಸಮಾವೇಶ: ನ.19ರ ಬೆ.11ಕ್ಕೆ ಶಿವಮೊಗ್ಗ, ಮ.3ಕ್ಕೆ ಚಿಕ್ಕ ಮಗಳೂರು. ನ.20ರ ಬೆ.11ಕ್ಕೆ ಉಡುಪಿ, ಮ.3ಕ್ಕೆ ಮಂಗಳೂರು, ನ.21ರ ಬೆ.11ಕ್ಕೆ ಕೊಡಗು, ಮ.3ಕ್ಕೆ ಮೈಸೂರು, ನ.22ರ ಬೆ.11ಕ್ಕೆ ಚಾ.ನಗರ, ಮ.3ಕ್ಕೆ ಮಂಡ್ಯ, ನ.23ರ ಬೆ.11ಕ್ಕೆ ಹಾಸನ.

ತಂಡ-4: ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬೈರತಿ ಬಸವರಾಜ, ಗೋಪಾಲಯ್ಯ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂ.ರಾಜೇಂದ್ರ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ-ಸಂಚಾಲಕ, ಕಾರ್ಯದರ್ಶಿ ಮುನಿರಾಜುರಾಜುಗೌಡ- ಸಹ ಸಂಚಾಲಕ.

ಸಮಾವೇಶ: ನ.19ರ ಬೆ.11ಕ್ಕೆ ದಾವಣಗೆರೆ, ಮ.3ಕ್ಕೆ ಚಿತ್ರದುರ್ಗ. 20ರ ಬೆ.11ಕ್ಕೆ ತುಮಕೂರು, ಮ.3ಕ್ಕೆ ರಾಮನಗರ, 21ರ ಬೆ.11ಕ್ಕೆ ಕೋಲಾರ, ಮ.3ಕ್ಕೆ ಚಿಕ್ಕಬಳ್ಳಾಪುರ ಮತ್ತು 22ರ ಬೆ.11ಕ್ಕೆ ಬೆಂಗಳೂರು ಗ್ರಾಮಾಂತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net