ಡ್ರೈನೇಜ್‌ಗೆ ಇಳಿದು ಸ್ವಚ್ಛಗೊಳಿಸಿದ ಬಿಜೆಪಿ ಮುಖಂಡ; ವಿಡಿಯೋ ನೋಡಿ

BJP Councillor Cleans Choked Sewer In Gwalior
Published on

ಮಧ್ಯಪ್ರದೇಶ: ಬಿಜೆಪಿ ಮುಖಂಡರೊಬ್ಬರು ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚರಂಡಿ ತುಂಬಿತ್ತು, ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಬರುತ್ತಿತ್ತು. ನೀರು ಹರಿಯುತ್ತಿಲ್ಲ ಎಂದು ಹಲವು ಬಾರಿ ಗ್ವಾಲಿಯರ್‌ನ ವಾರ್ಡ್-15ರ ಬಿಜೆಪಿ ಪುರಸಭಾ ಸದಸ್ಯ ದೇವೇಂದ್ರ ರಾಠೋಡ್ ದೂರಿದ್ದಾರೆ. ಆದರೂ ಅಧಿಕಾರಿಗಳು ಸ್ಪಂದಿಸದ ಕಾರಣ ನಾನೇ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದೇನೆ ಎಂದು ದೇವೇಂದ್ರ ತಿಳಿಸಿದರು.

ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ಸ್ವಂತ ಕೆಲಸ ಮಾಡುತ್ತಿದ್ದೇನೆ. ಬಿರ್ಲಾನಗರದ ಡ್ರೈನೇಜ್ ಶುಚಿಗೊಳಿಸಿದ್ದೇನೆ. ಚರಂಡಿಗೆ ಇಳಿದು ಸ್ವಚ್ಛಗೊಳಿಸುತ್ತಿರುವ ವಿಷಯ ತಿಳಿದ ನಗರಸಭೆಯ ಸಿಬ್ಬಂದಿ ಕೂಡಲೇ ಅಲ್ಲಿಗೆ ಆಗಮಿಸಿ ಸ್ವಚ್ಛಗೊಳಿಸಿದೆ ಎಂದಿದ್ದಾರೆ.

ಜನರು ನನಗೆ ಮತ ನೀಡಿದ್ದಾರೆ, ಅವರ ಮತಕ್ಕೆ ಬೆಲೆ ನೀಡಬೇಕು, ಆದ್ದರಿಂದ ಯಾರೂ ಕೇಳದ ಕಾರಣ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇನೆ ಮತ್ತು ಜನರು ಸಮಸ್ಯೆ ಎದುರಿಸುತ್ತಿದ್ದಾರೆ, ನಾನು ಸ್ವಚ್ಛಗೊಳಿಸಿದ ನಂತರ ನಗರಸಭೆ ನೌಕರರು ಸಹ ಬಂದು ಸ್ವಚ್ಛಗೊಳಿಸಲು ಪ್ರಾರಂಭಿಸಿದರು ಎಂದಿದ್ದಾರೆ.

ವಾರ್ಡ್ ಸಂಖ್ಯೆ 15ರಲ್ಲಿ ಬಹುಕಾಲದಿಂದ ಚರಂಡಿ ಸಮಸ್ಯೆ ಇದ್ದು, ಗಲೀಜು ನೀರು ಮನೆಗಳಿಗೆ ನುಗ್ಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಆಯುಕ್ತರು ಮತ್ತು ಮೇಯರ್ ಅವರಿಗೂ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net