ನಿಜಾಂಶ ಮುಚ್ಚಿಟ್ಟ ಆರೋಪ; ಯಶವಂತಪುರ ಜೆಡಿಎಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ದೂರು

jawarayi
Published on

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ವಿರುದ್ಧ ಕ್ಷೇತ್ರದ ಚುನಾವಣಾಧಿಕಾರಿಗೆ ಬಿಜೆಪಿ ದೂರು ಸಲ್ಲಿಸಿ, ನಾಮಪತ್ರ ಪರಿಶೀಲನೆ ವೇಳೆ ಈ ಅಂಶ ಪರಿಗಣಿಸಲು ಮನವಿ ಮಾಡಿದೆ.

ಯಶವಂತಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿಸೋಮಶೇಖರ್ ಅವರ ಚುನಾವಣೆ ಏಜೆಂಟ್ ಕೃಷ್ಣದಾಸ್ ಸಲ್ಲಿಸಿರುವ ದೂರಿನಲ್ಲಿ ಜವರಾಯಿಗೌಡ ಮಕ್ಕಳ ಹೆಸರಿನಲ್ಲಿರುವ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ

ಅದಲ್ಲದೆ, ಎರಡು ಕ್ರಿಮಿನಲ್ ಪ್ರಕಟರಣಗಳನ್ನು ಮುಚ್ವಿಟ್ಟಿದ್ದಾರೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಲೆಂದು ಕ್ಷೇತ್ರ ಚುನಾವಣಾ ಕಚೇರಿಗೆ ಜವರಾಯಿಗೌಡ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net