ಕಾಮಾಲೆ ಕಣ್ಣಿನ ಕೈ ನಾಯಕರಿಗೆ ಎಲ್ಲವೂ ಹಳದಿ

Udaykumar
ಉಡುಪಿಯ ಮಣೋಲಿಗುಜ್ಜಿಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಕೆ.ಉದಯಕುಮಾರ್​ ಶೆಟ್ಟಿ ಮಾತನಾಡಿದರು. ಶಾಸಕ ಯಶ್​ಪಾಲ್​ ಸುವರ್ಣ, ರಾಧಾಕೃಷ್ಣ ಶೆಟ್ಟಿ, ವಿಜಯ್​ಕುಮಾರ್​ ಉದ್ಯಾವರ, ಮಧುಕರ ಮುದ್ರಾಡಿ, ದಿನೇಶ್​ ಅಮೀನ್​, ಡಾ. ರವೀಂದ್ರ ಇತರರಿದ್ದರು.
Published on

ಕೆ.ಉದಯಕುಮಾರ್​ ಶೆಟ್ಟಿ ವ್ಯಂಗ್ಯ --- ಕಾಂಗ್ರೆಸ್​ನ ಚೊಂಬು ಜಾಹೀರಾತಿಗೆ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾಂಗ್ರೆಸ್​ ತನ್ನ ಚುನಾವಣಾ ಪ್ರಚಾರದ ಪತ್ರಿಕಾ ಜಾಹೀರಾತಿನಲ್ಲಿ ದೇಶದ ಜನತೆಗೆ ಬಿಜೆಪಿ ಚೊಂಬು ನೀಡಿದೆ ಎಂದು ಹೇಳಿದ್ದು, ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಅವರಿಗೆ ಅಬಿವೃದ್ಧಿಯೂ ಸಹ ಚೊಂಬಿನಂತೆ ಕಾಣುತ್ತಿರಬಹುದು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್​ ಶೆಟ್ಟಿ ವ್ಯಂಗ್ಯ ಮಾಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ದೊಡ್ಡಣಗುಡ್ಡೆಯ ಮಣೋಲಿಗುಜ್ಜಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ದೇಶದ ಹಣ ಲೂಟಿ

ಸ್ವಾತಂತ್ರ$್ಯದ ನಂತರ ನಾಲ್ಕು ತಲೆಮಾರುಗಳ ಆಡಳಿತ ನಡೆಸಿದ ಕಾಂಗ್ರೆಸ್​ಗೆ ಶೌಚಾಲಯ ನಿರ್ಮಿಸಿಕೊಡಲೂ ಆಗದೆ ದೇಶದ ಜನರಿಗೆ ಚೊಂಬು ನೀಡಿದ್ದು ಇದೇ ಕಾಂಗ್ರೆಸ್​. ಬಿಜೆಪಿ ತನ್ನ ಆಡಳಿತದಲ್ಲಿ ದೇಶದ 12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದೆ. ದೇಶದ ಹಣ ಲೂಟಿ ಹೊಡೆದು ಸ್ವಿಸ್​ ಬ್ಯಾಂಕ್​ನಲ್ಲಿ ಕೂಡಿಟ್ಟು, ದೇಶದ ಜನತೆಗೆ ಚೊಂಬು ನೀಡಿದ್ದೂ ಸಹ ಇದೇ ಕಾಂಗ್ರೆಸ್​ನ ನಾಯಕರೇ ಆಗಿದ್ದಾರೆ ಎಂದು ಟೀಕಿಸಿದರು.

ಸಭೆಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ, ಪ್ರಬುದ್ಧರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ, ಜಿಲ್ಲಾ ವಕ್ತಾರ ವಿಜಯ್​ಕುಮಾರ್​ ಉದ್ಯಾವರ, ಪ್ರಮುಖರಾದ ಮಧುಕರ ಮುದ್ರಾಡಿ, ದಿನೇಶ್​ ಅಮೀನ್​, ಡಾ. ರವೀಂದ್ರ, ಸುಂದರ್​ ಅಮೀನ್​, ನವೀನ್​ ರಾವ್​, ಮುರಳೀಧರ ಕುಂದರ್​, ಸುಭಾಷಿತ್​ಕುಮಾರ್​ ಇತರರಿದ್ದರು.

ಪ್ರಶಾಂತ್​ ಭಟ್​ ಪೆರಂಪಳ್ಳಿ ಸ್ವಾಗತಿಸಿದರು. ಶಂಕರ್​ ಕುಲಾಲ್​ ವಂದಿಸಿದರು.

ರಾಜ್ಯದ ಜನರಿಗೆ ಚೊಂಬು ಗ್ಯಾರಂಟಿ

ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಎಷ್ಟು ಬೆಳೆ ಪರಿಹಾರ ನೀಡಿದೆ, ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ನೀಡಿದೆ ಎನ್ನುವುದನ್ನು ಅಂಕಿ&ಅಂಶ ತೆಗೆದು ನೋಡಿ. ಆಗ ಯಾರು ಯಾರಿಗೆ ಚೊಂಬು ನೀಡಿದ್ದು ಎಂದು ತಿಳಿಯುತ್ತದೆ. ರಾಜ್ಯದ ಕಾಂಗ್ರೆಸ್​ ಸರ್ಕಾರ ದಿವಾಳಿಯ ಅಂಚಿಗೆ ಬಂದಿದ್ದು, ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ಬದಲು ಖಾಲಿ ಚೊಂಬು ನೀಡುವ ದಿನ ದೂರವಿಲ್ಲ ಎಂದು ಉದಯಕುಮಾರ್​ ಶೆಟ್ಟಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net