ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; 23 ಅಭ್ಯರ್ಥಿಗಳ ಲೀಸ್ಟ್ ಇಂತಿವೆ…

BJP
Published on

ಬೆಂಗಳೂರು: ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗೆಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಟಿಕೆಟ್ ನೀಡಿದರೂ, ನೀಡದೇ ಹೋದರೂ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಖಂಡಿತ ಎಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೆಸರು ಎರಡನೇ ಪಟ್ಟಿಯಲ್ಲೂ ಇಲ್ಲ.

ಬೈಂದೂರು ಕ್ಷೇತ್ರಕ್ಕೆ ಹೊಸಮುಖಕ್ಕೆ ಮಣೆ ಹಾಕಲಾಗಿದ್ದು, ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಗುರುರಾಜ್ ಗಂಟಿಹೊಳೆ ಬೈಂದೂರಿನಿಂದ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಬಿಜೆಪಿಗೆ ಕೆಲ ದಿನಗಳ ಹಿಂದೆ ಸೇರಿದ ನಾಗರಾಜಛಬ್ಬಿಗೆ ಕಲಘಟಗಿಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.

ನಿರೀಕ್ಷೆಯಂತೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಕೊಕ್ ನೀಡಲಾಗಿದ್ದು,ಹೊಸ ಮುಖ ದೀಪಕ್ ದೊಡ್ಡಯ್ಯಗೆ ಬಿಜೆಪಿ ಮಣೆ ಹಾಕಿದೆ. ಗುಬ್ಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ದಿಲೀಪ್ ಕುಮಾರ್​​ಗೆ ಟಿಕೆಟ್ ನೀಡಿದೆ.

ಮೊದಲ ಪಟ್ಟಿಯಲ್ಲಿ 189 ಹಾಗೂ ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿರುವ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನುಳಿದಂತೆ 12 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಬೇಕಿದೆ. ಶಿವಮೊಗ್ಗ ನಗರ, ಮಹದೇವಪುರ, ಗೋವಿಂದರಾಜ ನಗರ, ಹೆಬ್ಬಾಳ, ಕೃಷ್ಣರಾಜ ಪ್ರಮುಖ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಬೇಕಿದೆ.

ಹಾವೇರಿಯಲ್ಲಿ ಮೂರು ಬಾರಿ ಶಾಸಕರಾಗಿದ್ದ ನೆಹರು ಓಲೆಕಾರ್​ಗೆ ಟಿಕೆಟ್ ಕೈತಪ್ಪಿದೆ. ಗವಿಸಿದ್ದಪ್ಪ ದ್ಯಾಮಣ್ಣನವರ (ತಹಶಿಲ್ದಾರ) ನೂತನ ಅಭ್ಯರ್ಥಿಯಾಗಿ ಅವಕಾಶ ಪಡೆದುಕೊಂಡಿದ್ದಾರೆ. (ಮಾಹಿತಿ ಅಪ್​ಡೇಟ್ ಮಾಡಲಾಗುವುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net