

ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಬಿಹಾರದಲ್ಲಿ ಮೊದಲ ಹಂತದ ಮತದಾನ ಶುರುವಾದ ನಂತರವೂ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದಾರೆ. ಮಹಾಘಟ್ಬಂಧನಕ್ಕೆ ಮತ ಹಾಕಿ ಎಂದು ಯಾಚಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬಿಜೆಪಿ ಒತ್ತಾಯಿಸಿದೆ.
ಇಂದು ಬಿಹಾರ ಚುನಾವಣೆ. ಮೊದಲ ಹಂತದ ಮತದಾನ ಶುರುವಾದ ನಂತರ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, ನ್ಯಾಯ, ಉದ್ಯೋಗ, ರೈತರು, ಕಾರ್ಮಿಕರಿಗಾಗಿಯೇ ಇರುವ ಮಹಾಘಟ್ ಬಂಧನ್ (ಮಹಾಮೈತ್ರಿ)ಗೆ ಮತ ಹಾಕಿ ಗೆಲ್ಲಿಸಿ ಎಂದು ಟ್ವೀಟ್ ಮಾಡಿದ್ದರು.ಇದನ್ನೂ
ಚುನಾವಣೆ ದಿನ ಮತ ಯಾಚನೆ ಮಾಡುವುದು, ಪ್ರಚಾರ ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಇಂದು ಮುಂಜಾನೆಯೇ ಮತದಾನ ಶುರುವಾಗಿದ್ದು, ಅದಾದ ಕೆಲವೇ ಹೊತ್ತಲ್ಲಿ ರಾಹುಲ್ ಗಾಂಧಿ ಹೀಗೆ ಟ್ವೀಟ್ ಮಾಡಿದ್ದರು.
ಇದೀಗ ರಾಹುಲ್ ಗಾಂಧಿಯ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹಿಸಿದೆ. (ಏಜೆನ್ಸೀಸ್)