ಚುನಾವಣಾ ಸಮಿತಿಗಳಿಂದ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಯನ್ನು ಕೈಬಿಟ್ಟ ಬಿಜೆಪಿ

Vasundhara Raje
Published on

ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಬಿಜೆಪಿ ಎರಡು ಪ್ರಮುಖ ಚುನಾವಣಾ ಸಮಿತಿಗಳನ್ನು ರಚಿಸಿ ಪ್ರಕಟಣೆ ಹೊರಡಿಸಿದೆ.

ಪಕ್ಷದ ಹಿರಿಯ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೆ ಅವರನ್ನು ಈ ಎರಡು ಸಮಿತಿಗಳಿಂದ ಕೈಬಿಟ್ಟಿರುವುದು ಹಲವು ಅನುಮಾಕ್ಕೆ ಎಡೆ ಮಾಡಿಕೊಟ್ಟಿದೆ. ನೂತನ ಸಮಿತಿ ರಚಿಸಿರುವ ಕುರಿತು ರಾಜ್ಯಾಧ್ಯಕ್ಷ ಸಿ.ಪಿ. ಜೋಶಿ ಹಾಗೂ ರಾಜಸ್ಥಾನ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಮಾಹಿತಿ ನೀಡಿದ್ದಾರೆ.

21 ಸದಸ್ಯರ ಚುನಾವಣಾ ನಿರ್ವಹಣಾ ಸಮಿತಿಯ ನೇತೃತ್ವವನ್ನು ಮಾಜಿ ರಾಜ್ಯಸಭಾ ಸದಸ್ಯ ನಾರಾಯಣ್​ ಪಂಚಾರಿಯಾ ವಹಿಸಿದ್ದಾರೆ, ಪ್ರಣಾಳಿಕೆ ಸಮಿತಿ ಅಧ್ಯಕ್ಷತೆಯನ್ನು ಕೇಂದ್ರ ಕಾನೂನು ಸಚಿವ, ಬಿಕಾನೆರ್​ ಲೋಕಸಭಾ ಕ್ಷೇತ್ರದ ಸಂಸದ ಅರ್ಜುನ್​ ಮೇಘವಾಲ್​ ವಹಿಸಿದ್ದಾರೆ. ಈ ಎರಡು ಸಮಿತಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net