ಬಿಟ್ ಕಾಯಿನ್, ಪಿಎಸ್‌ಐ ನೇಮಕ ಸಮಗ್ರ ತನಿಖೆಗೆ ಆಗ್ರಹ

kimmane rathnakar (3)
Published on

ಬೆಂಗಳೂರು: ಕೋವಿಡ್ ಅಕ್ರಮ, 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ನೇಮಕ ಹಗರಣಗಳ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಬಿಟ್ ಕಾಯಿನ್ ಪ್ರಕರಣ ಚುರುಕುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಬರುತ್ತಿವೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಬಿಟ್ ಕಾಯಿನ್ ಮತ್ತು ಪಿಎಸ್‌ಐ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡುವಂತೆ ಮನವಿ ಮಾಡಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು ಬಿಟ್ ಕಾಯಿನ್ ಹಾಗೂ ಪಿಎಸ್‌ಐ ನೇಮಕ ಪ್ರಕರಣಗಳ ತನಿಖೆಯಲ್ಲಿ ನಮಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಸಮಗ್ರ ತನಿಖೆಗೆ ಒತ್ತಾಯಿಸಿರುವುದಾಗಿ ಕಿಮ್ಮನೆ ರತ್ನಾಕರ ತಿಳಿಸಿದರು.

ನೇರವಾದ ತನಿಖೆ ಮಾಡಿ ಎನ್ನುವುದು ನಮ್ಮ ಮನವಿ. ಹಿಂದಿನ ಗೃಹ ಸಚಿವರ ಪಾತ್ರವಿಲ್ಲ ಅಂದರೆ ಓಕೆ ಅಲ್ಲ. ಅರಗ ಅವರ ಮಗ ಜಮೀನು ಕೊಂಡಿದ್ದಾರೆ. ಅದಕ್ಕೆ ಪ್ರತ್ಯೇಕವಾಗಿ ರಸ್ತೆ ಮಾಡಿಸಿದ್ದಾರೆ.

2 ಕೋಟಿ ಹಣ ಖರ್ಚು ಮಾಡಿ ಮಾಡಿಸಿದ್ದಾರೆ. ಇದು ನಮಗೆ ಅನುಭವಕ್ಕೆ ಬಂದಿದೆ ಎಂದು ಆರೋಪಿಸಿದರು.  ತೀರ್ಥಹಳ್ಳಿಯಲ್ಲಿ 70 ಕೋಟಿ ಹಣ ಓಡಾಡಿದೆ. ಈಗ ಪ್ರಾಪರ್ಟಿ ಖರೀದಿ ನಡೆದಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಅವರಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಆ ಸಂದರ್ಭದಲ್ಲಿ ಅವರು ಗೃಹ ಸಚಿವರಿದ್ದರು. ಹಾಗಾಗಿ ತನಿಖೆ ಮಾಡಿ ಎಂದು ಒತ್ತಾಯಿಸಿರುವುದಾಗಿ ಕಿಮ್ಮನೆ ರತ್ನಾಕರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net