

ಕಾಡುಕೋಣದ ಎದುರು ಕೀಟಲೆ ಮಾಡಲು ಹೋದ ಸ್ಥಳೀಯರು ನಂತರ ಪೇಚಿಗೆ ಸಿಲುಕಿದ ಘಟನೆ ಕೊಪ್ಪ ತಾಲೂಕಿನ ಕಲ್ಲೂರಿನಲ್ಲಿ ನಡೆದಿದೆ.
ಕಾಡುಕೋಣವೊಂದು ರಸ್ತೆ ಪಕ್ಕದ ಗದ್ದೆಯ ಬಳಿ ಹೋಗುತ್ತಿತ್ತು. ಅದನ್ನು ನೋಡಿದ ಒಂದಷ್ಟು ಹುಡುಗರು ಸುಮ್ಮನಿರಲಾಗದೆ ಕರೆದು ಕೆಣಕಿದ್ದಾರೆ. ಅದನ್ನು ನೋಡಿದ ಕಾಡುಕೋಣ ನಂತರ ಜೋರಾಗಿ ಇವರತ್ತಲೇ ಓಡಿಬಂದಿದೆ. ಹೆದರಿ ಕಂಗಾಲಾದ ಯುವಕರು ಅಲ್ಲಿಯೇ ಇದ್ದ ಅಂಗಡಿಯೊಳಗೆ ಸೇರಿಕೊಂಡು ಬಾಗಿಲು ಮುಚ್ಚಿದ್ದಾರೆ.
ಯುವಕರು ಅಂಗಡಿಯ ಬಾಗಿಲು ಮುಚ್ಚುತ್ತಿದ್ದಂತೆ ಕೋಣ ಮತ್ತೊಂದು ಪಕ್ಕಕ್ಕೆ ಹಾದುಹೋಗಿದೆ. (ದಿಗ್ವಿಜಯ ನ್ಯೂಸ್)