

ಮಥುರ: ಮಹಾರಾಷ್ಟ್ರ ಎನ್ಸಿಪಿ ನಾಯಕ ಸಿದ್ದಿಕಿ ಬರ್ಬರ ಹತ್ಯೆಗೆ ಕಾರಣರಾದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ನಟ ಸಲ್ಮಾನ್ ಖಾನ್ 5 ಕೋಟಿ ರೂ. ಕೊಟ್ಟು, ತನ್ನ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಆತನಿಗೂ ಇದೇ ಗತಿ ಎಂದು ಗ್ಯಾಂಗ್ ಎಚ್ಚರಿಕೆ ನೀಡಿತ್ತು. ಈ ಘಟನೆಗಳು ಮಾಸುವ ಮುನ್ನವೇ ಇದೀಗ ಲಾರೆನ್ಸ್ ಸಹಚರರು (Bishnoi Gang) 10 ವರ್ಷದ ಬಾಲಕ ಆಧ್ಯಾತ್ಮಿಕ ವಾಗ್ಮಿ ಅಭಿನವ್ ಅರೋರಾಗೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದೆ. ಸದ್ಯ ಈ ವಿಷಯ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಬಾಲಕನ ತಾಯಿ ಕಣ್ಣೀರಿಟ್ಟಿದ್ದಾರೆ.
ಸೋಮವಾರ ನಮಗೆ ಬಿಷ್ಣೋಯಿ ಗ್ಯಾಂಗ್ ಕಡೆಯಿಂದ ದೂರವಾಣಿ ಕರೆಯೊಂದು ಬಂದಿತು. ಆತ ನಮ್ಮ 10 ವರ್ಷದ ಮಗ ಅಭಿನವ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಇದರಿಂದ ನಮಗೆ ತುಂಬ ಭಯ ಕಾಡುತ್ತಿದೆ. ನನ್ನ ಪುತ್ರ ಏನು ತಪ್ಪು ಮಾಡಿಲ್ಲ. ಅವನಿಗ್ಯಾಕೆ ಇಂತಹ ಕಷ್ಟಗಳು? ಅವನೇಕೆ ಇದನ್ನೆಲ್ಲ ಸಹಿಸಿಕೊಳ್ಳಬೇಕು? ಎಂದು ಅರೋರ ಅವರ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಾಕಿದ್ದಾರೆ.
"ಅಭಿನವ್ ಮೂರು ವರ್ಷಗಳ ಮಗುವಿದ್ದಾಗಲೇ ಆಧ್ಯಾತ್ಮಕ್ಕೆ ಒಲವು ಕಂಡುಕೊಂಡಿದ್ದ. ತನ್ನ ಕೆಲಸಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಅವನು ಇತರರೊಂದಿಗೆ ಹಂಚಿಕೊಳ್ಳುತ್ತಾನೆ. ನನ್ನ ಮಗ ಕೊಲೆ ಬೆದರಿಕೆ ಸ್ವೀಕರಿಸುವಂತ ತಪ್ಪೇನು ಮಾಡಿಲ್ಲ. ಇನ್ನು ಎಷ್ಟು ದಿನ ಇದನ್ನೆಲ್ಲ ಸಹಿಸಬೇಕು ನಾವು ಎಂದು ಅಭಿನವ್ ತಾಯಿ ಬಿಷ್ಣೋಯಿ ಗ್ಯಾಂಗ್ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).
ಸಾಮಾಜಿಕ ಜಾಲತಾಣದಲ್ಲಿ ಬಾಲಕ ಅಭಿನವ್ ಮತ್ತು ಸ್ವಾಮಿ ರಾಮಭದ್ರಾಚಾರ್ಯರ ಅವರ ವಿಡಿಯೋ ಭಾರೀ ವೈರಲ್ ಆಗಿತ್ತು, ಈ ದೃಶ್ಯದಲ್ಲಿ ಸ್ವಾಮಿಗಳು, ಬಾಲಕನಿಗೆ ಏರು ಧ್ವನಿಯಲ್ಲಿ ಬೈದಿದ್ದರು. ವೇದಿಕೆ ಮೇಲೆ ನಿಶಬ್ದತೆ ಪಾಲಿಸಬೇಬೇಕಿದ್ದ ಅಭಿನವ್, ಆ ನಿಯಮವನ್ನು ಮೆರೆತು ಮಂತ್ರ ಪಠಿಸಿದ್ದ. ಇದರಿಂದ ಕುಪಿತಗೊಂಡ ರಾಮಭದ್ರಾಚಾರ್ಯರು, ಕುಳಿತಲ್ಲೇ ಬಾಲಕನಿಗೆ ಬುದ್ಧಿ ಹೇಳಿದ್ದರು. ಈ ವಿಡಿಯೋ ಅಂದು ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
"ಇದೊಂದು ದೊಡ್ಡ ವಿಚಾರವೇ ಆಗಿರಲಿಲ್ಲ. ಈ ವಿಡಿಯೋ 2023ರದ್ದು, ಅದು ವೃಂದಾವನದಲ್ಲಿ ನಡೆದಿದ್ದು. ಅಭಿನವ್ ಎಷ್ಟು ಭಕ್ತಿಯಲ್ಲಿ ಮುಳುಗಿದ್ದನೆಂದರೆ, ವೇದಿಕೆಯ ಮೇಲೆ ಮೌನವಾಗಿರಬೇಕೆನ್ನುವುದನ್ನು ಮರೆತು ಮಂತ್ರಘೋಷ ಹಾಕಲು ಆರಂಭಿಸಿದ್ದ. ಇದಕ್ಕೆ ಆರಂಭದಲ್ಲಿ ಬೈದಿದ್ದ ಸ್ವಾಮಿ ರಾಮಭದ್ರಾಚಾರ್ಯರು ನಂತರದಲ್ಲಿ ಅವರೇ ಅವನಿಗೆ ಆರ್ಶೀವಾದ ಮಾಡಿದ್ದರು. ಇದು ಯಾರಿಗೂ ಕಾಣಿಸಲಿಲ್ಲ ಅಲ್ಲವೇ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).