ಬಾಳೆಹೊನ್ನೂರಿನಲ್ಲಿ ಮರಿಯ ಜಯಂತಿ ಸಂಭ್ರಮ

08bhr 1
ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಮಾತೆ ಮರಿಯ ಜಯಂತಿಯ ಅಂಗವಾಗಿ ಧರ್ಮಗುರು ಹೆನ್ರಿೌಲ್ ಡಿಸೋಜಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆಯನ್ನು ನಡೆಯಿತು.
Published on

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ಶುಕ್ರವಾರ ಕ್ರೈಸ್ತರು ಸಡಗರ, ಸಂಭ್ರಮದಿಂದ ಮಾತೆ ಮರಿಯ ಜಯಂತಿ ಹಾಗೂ ಹೊಸಕ್ಕಿ ಹಬ್ಬ ಆಚರಿಸಿದರು.
ಚರ್ಚ್‌ನ ಧರ್ಮಗುರು ೌಲ್ ಡಿಸೋಜಾ ಅವರು ವಿಶೇಷ ಬಲಿಪೂಜೆ ನೆರವೇರಿಸಿ ಮಾತನಾಡಿ, ಈ ಬಾರಿಯ ಮರಿಯ ಜಯಂತಿ ಸಂದರ್ಭದಲ್ಲಿ ಪ್ರತಿಯೊಬ್ಬ ಸಮುದಾಯ ಬಾಂಧವರು ಸಮಾಜ, ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ದೇವರಲ್ಲಿ ಪ್ರಾರ್ಥಿಸಬೇಕಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ ಬಾಂಧವ್ಯಗಳು ವೃದ್ಧಿಯಾಗಬೇಕಿದೆ ಎಂದರು.
ದೇವರು ಪ್ರಕೃತಿಯನ್ನು ಸೃಷ್ಟಿಸಿದ ನಂತರ ಮನುಷ್ಯನನ್ನು ಸೃಷ್ಟಿ ಮಾಡಿದ್ದಾರೆ. ಭೂಮಿಯಲ್ಲಿ ಮನುಷ್ಯನಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಈ ಪ್ರಕೃತಿಯಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸಕ್ಕಿ ಹಬ್ಬದ ಮೂಲಕ ಪ್ರಕೃತಿ ಮಾತೆಯನ್ನು ನಮಿಸುವ ಕಾರ್ಯ ಮರಿಯ ಜಯಂತಿಯಂದು ಮಾಡಲಾಗುತ್ತಿದೆ ಎಂದರು.
ಮರಿಯ ಜಯಂತಿ ಹಬ್ಬವು ಕ್ರೈಸ್ತ ಕುಟುಂಬಗಳ ಸದಸ್ಯರ ಬಾಂಧವ್ಯಬೆಸೆಯುವ ಹಬ್ಬವಾಗಿದೆ. ಪ್ರಮುಖವಾಗಿ ಕುಟುಂಬದಲ್ಲಿನ ಸದಸ್ಯರೊಂದಿಗಿನ ಪ್ರೀತಿ, ಐಕ್ಯತೆ ಮೂಡಿಸಿ ಸಂಸ್ಕೃತಿ ಬೆಳೆಸುತ್ತದೆ. ಪ್ರತಿ ಕ್ರೈಸ್ತ ಕುಟುಂಬದವರಿಗೆ ಪಾಯಸ, ಕಬ್ಬು, ಭತ್ತದ ತೆನೆಗಳನ್ನು ಆಶೀರ್ವದಿಸಿ, ಸಿಹಿ ವಿತರಿಸಲಾಯಿತು. ಭಕ್ತರು ಮಾತೆ ಮರಿಯಮ್ಮನವರ ವಿಗ್ರಹಕ್ಕೆ ವಿವಿಧ ಬಗೆಯ ಪುಷ್ಪಗಳನ್ನು ಅರ್ಪಿಸಿ ನಮಿಸಿದರು.
ಧರ್ಮಗುರು ಅವಿನ್ ಪ್ರಕಾಶ್ ಮತ್ತು ಚರ್ಚ್ ಸಮಿತಿಯ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net