ಬೆಕ್ಕುಗಳಲ್ಲಿ ಹಕ್ಕಿ ಜ್ವರ ಪತ್ತೆ ! ಸಾಕು ಪ್ರಾಣಿ ಬೆಕ್ಕಿನಿಂದಲೇ ಮನುಷ್ಯರಿಗೆ ಕಾದಿದೆ ಅಪಾಯ..Bird Flu Detected In Cats

Cat
ಸಾಂದರ್ಭಿಕ ಚಿತ್ರ
Published on

ಮಧ್ಯಪ್ರದೇಶ :  ( Bird Flu Detected In Cats )   H5N1 (ಹಕ್ಕಿ ಜ್ವರ) ಇದೇ ಮೊದಲ ಬಾರಿಗೆ ಸಾಕುಪ್ರಾಣಿ ಬೆಕ್ಕಿನಲ್ಲಿ ಹಕ್ಕಿಜ್ವರ ಕಂಡು ಬಂದಿರೋದು ದೃಢವಾಗಿದೆ. ಬೆಕ್ಕಿನಲ್ಲಿ ಕಂಡು ಬಂದಿರೋ H5N1 ಬಹಳ ಬೇಗ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಕ್ಕಿ ಜ್ವರ ವೈರಸ್ (H5N1) ಕೋಳಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಸಾಕು ಬೆಕ್ಕಿನಲ್ಲಿ ಈ ವೈರಸ್ ಪತ್ತೆಯಾಗಿರುವುದು ಈಗ ಸಂಚಲನ ಮೂಡಿಸುತ್ತಿದೆ. ಇದು ದೇಶದಲ್ಲಿ ದಾಖಲಾದ ಮೊದಲ ಪ್ರಕರಣವಾಗಿದೆ. ಈ ವೈರಸ್ ಕೋಳಿಗಳಲ್ಲಿ ವ್ಯಾಪಕವಾಗಿ ಹರಡಿತ್ತು, ಆದರೆ ಈಗ ಬೆಕ್ಕುಗಳಲ್ಲಿಯೂ ಕಂಡುಬರುತ್ತಿರುವುದು ಆರೋಗ್ಯ ತಜ್ಞರನ್ನು ಚಿಂತೆಗೀಡುಮಾಡುತ್ತಿದೆ. ಹಕ್ಕಿ ಜ್ವರ ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯಿದೆ, ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಪಕ್ಷಿಗಳು, ಬೆಕ್ಕುಗಳು ಮತ್ತು ಇತರ ಪ್ರಾಣಿಗಳೊಂದಿಗೆ ನೇರ ಸಂಪರ್ಕ ಹೊಂದಿರುವವರು ಹೆಚ್ಚು ಜಾಗರೂಕರಾಗಿರಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.

ಈ ಹಕ್ಕಿ ಜ್ವರ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಪ್ರಕರಣಗಳು ಈಗಾಗಲೇ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ವರದಿಯಾಗಿವೆ. ಈಗ ಭಾರತದಲ್ಲೂ ಬೆಕ್ಕುಗಳಲ್ಲಿ ಇದು ಕಂಡುಬಂದಿರುವುದರಿಂದ, ಇದು ಗಂಭೀರ ಸ್ಥಿತಿಯಾಗಿದೆ ಎಂದು ನಂಬಲಾಗಿದೆ. ಸರ್ಕಾರಿ ಆರೋಗ್ಯ ಇಲಾಖೆಗಳು ಮತ್ತು ಪಶುಸಂಗೋಪನಾ ಅಧಿಕಾರಿಗಳು ಇದರ ಬಗ್ಗೆ ವಿಶೇಷ ಕಣ್ಗಾವಲು ಸ್ಥಾಪಿಸುವ ಅವಶ್ಯಕತೆಯಿದೆ. ಜನರು ಭಯಪಡುವ ಅಗತ್ಯವಿಲ್ಲದಿದ್ದರೂ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.

ಎಚ್‌5ಎನ್‌1 ಎಂಬುದು ಹಕ್ಕಿ ಜ್ವರವಾದರೂ, ಅದರ ರೂಪಾಂತರಿಗಳು ಸಸ್ತನಿಗಳಲ್ಲೂ ಕಾಣಿಸಿಕೊಳ್ಳಬಲ್ಲವು. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆಯಿದ್ದರೂ, ಇದು ಸಾಂಕ್ರಾಮಿಕವಾಗಿ, ಕೋವಿಡ್ -19ನಂತೆ ಏಕಾಏಕಿ ಉಲ್ಬಣಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಆತಂಕ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ, ಕೋಳಿ ಫಾರ್ಮ್‌, ಕಾಡು ಹಕ್ಕಿಗಳ ಜೊತೆಗೆ, ಮನುಷ್ಯರು ಸೇರಿದಂತೆ ಸಾಕು ಪ್ರಾಣಿಗಳಂತಹ ಸಸ್ತನಿಗಳ ಮೇಲಿನ ನಿಗಾವನ್ನು ಹೆಚ್ಚಿಸಲಾಗಿದೆ

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಹಕ್ಕಿಜ್ವರ ಹೆಚ್ಚಾಗುತ್ತಿದೆ. ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರಗಳಿಂದ ಕರ್ನಾಟಕ್ಕೆ ಬರುವ ಕೋಳಿ, ಮೊಟ್ಟೆಗಳಿಗೆ ನಿರ್ಬಂಧ ಹಾಕಲು ಸರ್ಕಾರ ಯೋಜಿಸಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮದ ಕೋಳಿಗಳಲ್ಲಿ ಮೊದಲ ಬಾರಿಗೆ ಶಂಕಿತ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net