

ಹ್ಯಾಲೋವೀನ್ ಪಾರ್ಟಿಗಾಗಿ ಜನರು ವಿಭಿನ್ನ ಡ್ರೆಸ್ಗಳನ್ನ ಧರಿಸುತ್ತಾರೆ. ಅಂತೆಯೇ ಮಕ್ಕಳಿಗೆ ಹ್ಯಾಲೋವಿನ್ ನಿಮಿತ್ತ ವಿಶೇಷ ಫ್ಯಾಷನ್ ಶೋಗಳನ್ನ ನಡೆಸುತ್ತಾರೆ. ಹಾಗೇನೆ ಪೋಷಕರು ಮಕ್ಕಳಿಗೆ ಹ್ಯಾಲೋವಿನ್ ಥೀಮ್ ಬೇಸ್ಡ್ ಕಾಸ್ಟ್ಯೂಮ್ಗಳನ್ನೇ ಹಾಕಿಸುತ್ತಾರೆ.
ಇದೀಗ ಬಾಲಿವುಡ್ ಬ್ಯೂಟಿ ಬಿಪಾಶ ಬಾಸು ಹ್ಯಾಲೋವಿನ್ಗಾಗಿ ತಮ್ಮ ಮಗಳಿಗೆ ಆರೆಂಜ್ ಕಲರ್ ಡ್ರೆಸ್ ಹಾಕಿಸಿದ್ದಾರೆ. ಬಿಪಾಶಾ ಬಸು ತಮ್ಮ ಪುಟ್ಟ ಮಗಳ ವಿಡಿಯೋವೊಂದನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹ್ಯಾಲೋವಿನ್ ಡ್ರೆಸ್ ಧರಿಸಿದ್ದ ಮಗಳು ದೇವಿಯನ್ನ ತಂದೆ ಕರಣ್ ಸಿಂಗ್ ಗ್ರೋವರ್ ತಮ್ಮ ಹೆಗಲ ಮೇಲೆ ಇರಿಸಿಕೊಂಡಿದ್ದಾರೆ.
ಜತೆಗೆ ಇಬ್ಬರೂ ಖುಷಿಯಾಗಿ ಆಟವಾಡಿದ್ದಾರೆ. ಬಿಪಾಶಾ ಬಾಸು ಇಬ್ಬರ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಸದ್ಯ ಈ ವಿಡಿಯೋಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬಿಪಾಶ ಬಾಸು ಸುಮಾರು 15 ವರ್ಷ ವಯಸ್ಸಿನವರಾಗಿದ್ದಾಗಲೇ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ರು. ಈಕೆ ಹಿಂದೆ ಮಾತ್ರವಲ್ಲ ತಮಿಳು, ತೆಲುಗು, ಬೆಂಗಾಳಿ ಮತ್ತು ಇತರೆ ಭಾಷೆಗಳಲ್ಲಿ ನಟಿಸಿದ್ದು, ಈಕೆ ಬಹುಭಾಷಾ ನಟಿ ಅಂತಲೇ ಹೇಳಬಹುದು.
ಇನ್ನು ಕರಣ್ ಸಿಂಗ್ ಗ್ರೋವರ್ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟಿಸಲಿರುವ ಫೈಟರ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.