ಮೂಡುಬಿದಿರೆ ಬಿಲ್ಲವ ಸಂಘದಲ್ಲಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿಯುಸಿ ಸಾಧಕಿ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸುರೇಶ್ ಕೆ.ಪೂಜಾರಿ, ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ, ಎಂ.ವೇದ ಕುಮಾರ್ ಇದ್ದರು.
’ ಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಾರ್ಹತಾ ಕಾರ್ಯಾಗಾರ
‘ಬೆಳಕು-2026 ಯಶಸ್ಸಿನ ಮಾರ್ಗ
ಮೂಡುಬಿದಿರೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮೂಡುಬಿದಿರೆ ಆಶ್ರಯದಲ್ಲಿ ಸ್ಪಾರ್ಕ್ ಬಿಲ್ಲವ ವೃತ್ತಿಪರರ ಸಮಿತಿ ಬೆಂಗಳೂರು ವತಿಯಿಂದ ‘ಬೆಳಕು-2026 ಯಶಸ್ಸಿನ ಮಾರ್ಗಗಳು’ ಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಾರ್ಹತಾ ಕಾರ್ಯಾಗಾರ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶನಿವಾರ ನಡೆಯಿತು.
ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು ಆಳ್ವಾಸ್ ಕಾಲೇಜು ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಕಾರ್ಯಾಗಾರದ ಉದ್ದೇಶ ಶ್ಲಾಘಿಸಿದರು. ಎಸ್ಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಅಧ್ಯಕ್ಷ ಎಂ.ವೇದ ಕುಮಾರ್ ಅಭಿನಂದಿಸಿದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100ರಷ್ಟು ಅಂಕ ಗಳಿಸಿದ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಆಕೆಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವಹಿಸಿಕೊಳ್ಳಲಿದೆ ಎಂದು ಎಂ.ವೇದ ಕುಮಾರ್ ಘೋಷಿಸಿದರು. ಮುಖ್ಯ ಉಪನ್ಯಾಸಕರಾಗಿ ಅಲೆನ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್‌ನ ಕೇಂದ್ರ ಮುಖ್ಯಸ್ಥ ಅಭಿಮನ್ಯು ತೋಮರ್, ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವೃತ್ತಿಪರ ಸಮಾಲೋಚನೆ ಹಾಗೂ ತರಬೇತಿ ವಿಭಾಗ ಮುಖ್ಯಸ್ಥ ಭರತ್ ಜಿ.ಕುಮಾರ್, ಬೆಂಗಳೂರು ಜಿಸಿಸಿ ಇಂಡಸ್ಟ್ರಿಯ ಹಿರಿಯ ಹಣಕಾಸು ಅಧಿಕಾರಿ ಕಿಶೋರ್ ಕೋಟ್ಯಾನ್ ಮಾರ್ಗದರ್ಶನ ನೀಡಿದರು.
ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಿತ್ತರಂಜನ್ ಸಾಲಿಯಾನ್, ಶ್ರೀಕಾಂತ್, ಸ್ಪಾರ್ಕ್ ಸಮಿತಿ ಅಧ್ಯಕ್ಷ ರವಿಚಂದ್ರ ಎಂ.ಉಪಸ್ಥಿತರಿದ್ದರು. ಪವಿತ್ರಾ ಹಾಗೂ ದೇವಿಪ್ರಸಾದ್ ನಿರೂಪಿಸಿದರು.