ಪೌರ ಕಾಮಿರ್ಕರನ್ನು ಖಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ

21-RNR-03
Published on

ರಾಣೆಬೆನ್ನೂರ: ಗ್ರಾಪಂಯಲ್ಲಿ 30 ವರ್ಷದಿಂದ ದುಡಿದ ಪೌರ ಕಾಮಿರ್ಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಭೀಮ್​ ಆಮಿರ್ ಕರ್ನಾಟಕ ಏಕತಾ ಮಿಷನ್​ ವತಿಯಿಂದ ಗುರುವಾರ ತಾಲೂಕಿನ ಬಿಲ್ಲಹಳ್ಳಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ಗ್ರಾಪಂನಲ್ಲಿ ಬಸಪ್ಪ ಮಲ್ಲಾಡದ ಎಂಬುವರು ಕಳೆದ 30 ವರ್ಷದಿಂದ ಪೌರ ಕಾಮಿರ್ಕರಾಗಿ ಸೇವೆ ಮಾಡುತ್ತಿದ್ದಾರೆ. ಆದರೆ, ಇದೀಗ ಗ್ರಾಪಂನವರು ಅವರನ್ನು ಖಾಯಂ ಮಾಡಿಕೊಳ್ಳುವ ಬದಲು ಬೇರೆಯವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಸಪ್ಪ ಅವರ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗುತ್ತದೆ.

ಆದ್ದರಿಂದ ಗ್ರಾಪಂ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಬಸಪ್ಪ ಅವರಿಗೆ ಕಾಯಂ ನೌಕರಿ ನೀಡಬೇಕು. ಇಲ್ಲವೆ ಅವರ ಮಗನಿಗೆ ಕೊಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಮೈಲಪ್ಪ ದಾಸಪ್ಪನವರ, ನವೀನ ಮೆಣಸಿನಹಾಳ, ಪ್ರವಿಣ ಮುದೇನೂರ, ಭರತ ಪೂಜಾರ, ಯಶವಂತ ಕರೆತಿಮ್ಮಣ್ಣನವರ, ಹೊನ್ನಪ್ಪ ಯಲ್ಲಾಪುರ, ಮಂಜಪ್ಪ ಮೈದೂರ, ಧರ್ಮಣ್ಣ ಅಂತರವಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net