67 ವಯಸ್ಸಿನ ಬಿಲ್​ ಗೇಟ್ಸ್​ ಜೀವನದಲ್ಲಿ ಮತ್ತೊಮ್ಮೆ ಅರಳಿದ ಪ್ರೀತಿ!

bill gates paul hurd
Published on

ನವದೆಹಲಿ: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಂದೇ ಹೆಸರಾಗಿರುವ ಬಿಲ್​ ಗೇಟ್ಸ್​ ಕೆಲವು ತಿಂಗಳುಗಳ ಹಿಂದೆ ತಮ್ಮ ಪತ್ನಿಗೆ ಡಿವೋರ್ಸ್​ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಅವರು, ಒರಾಕಲ್​ ಕಂಪನಿಯ ಮಾಜಿ ಸಿಇಒ ಪತ್ನಿ ಜೊತೆಗೆ ಡೇಟಿಂಗ್​ ನಡೆಸುತ್ತಿದ್ದಾರೆ.

ಪೌಲಾ​ ಹರ್ಡ್​, ಒರಾಕಲ್​ನ ಮಾಜಿ ಸಿಇಒ ಮಾರ್ಕ್​ ಹರ್ಡ್​ ಪತ್ನಿ. ಮಾರ್ಕ್​ ಹರ್ಡ್​ 2019 ರಲ್ಲಿ ನಿಧನರಾಗಿದ್ದಾರೆ. ಸದ್ಯ ವಿಧವೆಯಾಗಿರುವ ಪೌಲಾ ಹರ್ಡ್ (60) ಅವರೊಂದಿಗೆ ಬಿಲ್​ ಗೇಟ್ಸ್​ ಡೇಟಿಂಗ್​ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್‌ನಲ್ಲಿ ಇವರಿಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದರು. ಇವರಿಬ್ಬರೂ ಅಕ್ಕಪಕ್ಕ ಕುಳಿತು ಆಟ ನೋಡುತ್ತಿದ್ದರು. "ಅವರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ" ಎಂದು ಪೌಲಾ ಹಾಗೂ ಬಿಲ್​ ಗೇಟ್ಸ್​ರ ಸ್ನೇಹಿತರೊಬ್ಬರು ಹೇಳಿದ್ದರು. "ಅವರು ಒಂದು ವರ್ಷದಿಂದ ಒಟ್ಟಿಗೆ ಇದ್ದಾರೆ. ಪೌಲಾರನ್ನು ಯಾವಾಗಲೂ 'ಮಿಸ್ಟರಿ ವುಮೆನ್' ಎಂದು ಕರೆಯಲಾಗುತ್ತದೆ. ಆದರೆ ಬಿಲರ್​ ಗೇಟ್ಸ್​ರ ಆಂತರಿಕ ವಲಯಕ್ಕೆ ಅವರು ಪೌಲಾ ಜೊತೆಗೆ ಸಂಬಂಧದಲ್ಲಿದ್ದಾರೆ ಎಂಬುದು ಗೊತ್ತಿರದ ಸಂಗತಿ ಅಲ್ಲ" ಎಂದು ಆ ಸ್ನೇಹಿತ ಮಾಧ್ಯಮಕ್ಕೆ ಹೇಳಿದ್ದಾರೆ.

ಪೌಲಾ ಹರ್ಡ್​ರ ಪತಿ ಅಕ್ಟೋಬರ್ 2019 ರಲ್ಲಿ 62 ನೇ ವಯಸ್ಸಿನಲ್ಲಿ ಕ್ಯಾನ್ಸರ್​ನ ಕಾರಣ ನಿಧನರಾದರು. ಪೌಲಾ ಹರ್ಡ್ ಈವೆಂಟ್ ಪ್ಲಾನರ್ ಮತ್ತು ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಅವರು ಈ ಹಿಂದೆ ಟೆಕ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿದರು.

ಪೇಜಿಕ್ಸ್ ವರದಿಯ ಪ್ರಕಾರ, ಪೌಲಾ ಹರ್ಡ್ ಮತ್ತು ಬಿಲ್ ಗೇಟ್ಸ್ ಜತೆಗೆ ಓಡಾಡುತ್ತಾರೆ. ಅವರು ಟೆನಿಸ್ ಮೇಲಿನ ಪ್ರೀತಿಯಿಂದಾಗಿ ಮಾರ್ಕ್ ಸಾವಿನ ಮೊದಲು ಭೇಟಿಯಾಗಿದ್ದರು.

ಕಳೆದ ತಿಂಗಳು, ಅವರು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ನಲ್ಲಿ ಪುರುಷರ ಸಿಂಗಲ್ಸ್​ ಫೈನಲ್‌ನಲ್ಲಿ ಆಟವನ್ನು ಆನಂದಿಸುತ್ತಿರುವುದು ಕಂಡುಬಂದಿತ್ತು. ಅವರು ನಗರದಾದ್ಯಂತ ಒಟ್ಟಿಗೆ ನಡೆದಾಡುವುದನ್ನು ನೋಡಿದಾಗ ಅವರಿಬ್ಬರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು.

ಮೆಲಿಂಡಾ ಫ್ರೆಂಚ್ ಗೇಟ್ಸ್ ಮತ್ತು ಬಿಲ್ ಗೇಟ್ಸ್ ಸುಮಾರು 30 ವರ್ಷಗಳ ದಾಂಪತ್ಯದ ನಂತರ ಮೇ 2021 ರಲ್ಲಿ ವಿಚ್ಛೇದನವನ್ನು ಘೋಷಿಸಿದರು. ಆದರೆ ದಂಪತಿಗಳು ತಮ್ಮ ಪ್ರತಿಷ್ಠಾನ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಒಟ್ಟಿಗೆ ನಡೆಸುವುದನ್ನು ಮುಂದುವರಿಸುವುದಾಗಿ ಘೋಷಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net