VIDEO| ಗಣಿತ ಎಂದರೆ ಇಷ್ಟು ಸುಲಭನಾ ಅನ್ನಿಸುತ್ತೇ ಈ ವಿಡಿಯೋ ನೋಡಿದ ಮೇಲೆ; ಇದು ಬಿಹಾರ ಶಿಕ್ಷಕಿ ಮಾಡಿರುವ ಲೆಕ್ಕದ ಪಾಠ!

MATHS
Published on

ಪಾಟ್ನಾ: ಗಣಿತ ಅಥವಾ ಲೆಕ್ಕ ಎಂದರೆ ಕಬ್ಬಿಣದ ಕಡಲೆ. ಕೇವಲ ಮಕ್ಕಳಿಗಲ್ಲ ಕೆಲ ದೊಡ್ಡವರಿಗೂ ಕೂಡ. ಆದರೆ ಬಿಹಾರದ ಈ ಶಿಕ್ಷಕಿ ಭಾಗಾಕಾರವನ್ನು ಸರಳವಾಗಿ ಕಲಿಸುವ ಮೂಲಕ ಗಣಿತವನ್ನು ಸುಲಭಗೊಳಿಸಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಉದ್ಯಮಿ ಆನಂದ್​ ಮಹೀಂದ್ರ ಮತ್ತು ನಟ ಶಾರುಖ್​​ ಖಾನ್​ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ತಾವೂ ಹಂಚಿಕೊಂಡಿದ್ದಾರೆ. ಟೀಚರ್ಸ್​ ಆಫ್​ ಬಿಹಾರ್​ ಎಂಬ ಫೇಸ್​ಬುಕ್​ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಬಂಕಾ ಜಿಲ್ಲೆಯ ಬೌನ್ಸಿ ಬ್ಲಾಕ್​ನ ಶಿಕ್ಷಕಿ ರೂಬಿ ಕುಮಾರಿ ಅವರು ತಮ್ಮ ಶಾಲೆಯಲ್ಲಿ ಭಾಗಾಕಾರವನ್ನು ಹೇಳಿಕೊಡುತ್ತಿದ್ದಾರೆ. ವಿದ್ಯಾರ್ಥಿನಿಯೊಬ್ಬಳನ್ನು ನಿಲ್ಲಿಸಿ, ಆಕೆಯ ಹತ್ತು ಬೆರಳಗಳ ಸಹಾಯದೊಂದಿಗೆ ಗಣಿತ ಕಲಿಸಿದ್ದಾರೆ.

ಉದ್ಯಮಿ ಆನಂದ ಮಹೀಂದ್ರ ಅವರು ಆಶ್ಚರ್ಯ ವ್ಯಕ್ತಪಡಿಸುತ್ತ, "ಇಂತಹ ಸರಳ ಲೆಕ್ಕಾಚಾರದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಇವರು ನನಗೆ ಶಿಕ್ಷಕಿಯಾಗಿದ್ದರೆ ನಾನು ಗಣಿತದ ವಿಷಯದಲ್ಲಿ ಇನ್ನೂ ಬುದ್ಧಿವಂತನಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ 42 ಸಾವಿರ ಲೈಕ್​ ಪಡೆದಿದ್ದರೆ, 11 ಸಾವಿರ ಮಂದಿ ರೀಟ್ವೀಟ್​ ಮಾಡಿದ್ದಾರೆ.

"ನನ್ನ ಜೀವನದ ಎಷ್ಟೋ ಸಮಸ್ಯೆಗಳು ಈ ಲೆಕ್ಕದಿಂದ ಬಗೆಹರಿದವು. ಬೈಜು ಸಂಸ್ಥೆಗೆ ಈ ಸರಳ ವಿಧಾನ ಅಳವಡಿಕೊಳ್ಳಲು ತಿಳಿಸುತ್ತೇನೆ" ಎಂದು ನಟ ಶಾರುಕ್​ ಖಾನ್​ ಬರೆದಿದ್ದಾರೆ.

ಭಾಗಾಕಾರವನ್ನು ಸರಳವಾಗಿ ಕಲಿಯುವ ಬಗ್ಗೆಯೂ ಈ ವಿಡಿಯೋ ನೋಡಿದವರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈವರೆಗೆ 3.5 ವೀಕ್ಷಿಸಿದ್ದು, ಒಂದೂವರೆ ಲಕ್ಷ ಮಂದಿ ಇದನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net