ತವರು ಮನೆಯಿಂದ ಪತ್ನಿ ಬರುವುದು ತಡವಾಯಿತೆಂಬ ಸಿಟ್ಟಿನಲ್ಲಿ ತನ್ನ ಖಾಸಗಿ ಅಂಗವನ್ನೇ ಕೊಯ್ದುಕೊಂಡ ಪತಿ!

Hospital
Published on

ಬಿಹಾರ: ತವರು ಮನೆಗೆ ತೆರಳಿದ ಪತ್ನಿ ಹೇಳಿದ ದಿನದಂದು ಮರಳಿಲ್ಲ ಎಂಬ ಕಾರಣಕ್ಕೆ ಕೆಲವು ದಂಪತಿಗಳ ನಡುವೆ ಸಣ್ಣ ಮನಸ್ಥಾಪಕ್ಕೆ ಕಾರಣವಾಗುತ್ತದೆ. ಅಂತೆಯೇ ಒಂದೆರಡು ದಿನಗಳಲ್ಲಿ ಆ ಸಿಟ್ಟು ಕಡಿಮಾಗುತ್ತದೆ. ಆದರೆ ಇಲ್ಲೊಬ್ಬ ಪತ್ನಿ ತವರು ಮನೆಯಿಂದ ಹಿಂತಿರುಗಿಲ್ಲ ಎಂಬ ಸಿಟ್ಟಿನಲ್ಲಿ ಚೂರಿಯಿಂದ ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡಿದ್ದಾನೆ. ಈ ವಿಚಿತ್ರ ಘಟನೆಯೊಂದು ಮಾಧೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿ ನಯಾನಗರ ಎಂಬಲ್ಲಿ ನಡೆದಿದೆ.

ಕೃಷ್ಣ ಬಾಸುಕಿ(25) ಎಂಬಾತ ಮಲೋಧ್ ವಾರ್ಡ್ ನಿವಾಸಿ ಅನಿತಾ ಎಂಬಾಕೆಯನ್ನು ವಿವಾಹವಾಗಿದ್ದ. ಪಂಜಾಬ್​ನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ, ಎರಡು ತಿಂಗಳ ಹಿಂದೆ ಪತ್ನಿಯೊಂದಿಗೆ ನಯಾನಗರದಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದ. ಈ ವೇಳೆ ಪತ್ನಿ ಗಂಡನ ಮನೆಯಿಂದ ತವರು ಮನೆಗೆ ಹೋಗಿದ್ದಾಳೆ. ಆದರೆ ಅಲ್ಲಿಂದ ಮರಳಲು ತಡಮಾಡಿದ್ದು ಕೃಷ್ಣ ಬಾಸುಕಿಯ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಸಿಟ್ಟಾಗಿ ಹರಿತವಾದ ಚಾಕು ಬಳಸಿ ತನ್ನ ಖಾಸಗಿ ಅಂಗವನ್ನೇ ಕೊಯ್ದುಕೊಂಡಿದ್ದಾನೆ.

ಮನೆಯಲ್ಲಿ ರಕ್ತದ ಹರಿವು ಕಂಡ ಕುಟುಂಬಸ್ಥರು ಒಮ್ಮಲೇ ಗಾಬರಿಯಾಗಿದ್ದಾರೆ. ಈ ವೇಳೆ ಕೃಷ್ಣ ಬಾಸುಕಿಯ ಎಡವಟ್ಟಿನ ಕೆಲಸ ಗೊತ್ತಾಗಿದೆ. ಕೂಡಲೇ ಆತನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವರದಿಯ ಪ್ರಕಾರ ಕೃಷ್ಣ ಬಾಸುಕಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಸದ್ಯ ಚಿಕಿತ್ಸೆ ನೀಡುತ್ತಿರುವ ಡಾ.ಸುಕೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೃಷ್ಣ ಬಾಸುಕಿ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net