ಬಿಹಾರ ವಿಧಾನಸಭೆ ಚುನಾವಣೆ: 11 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ| AAP

Untitled design - 2025-10-06T184527.581
Published on

AAP: ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 6ರಿಂದ ಎರಡು ಹಂತದಲ್ಲಿ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಆಮ್ ಆದ್ಮಿ ಪಕ್ಷ ತನ್ನ ಮೊದಲ 11 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ(ಅ. 06) ಬಿಡುಗಡೆ ಮಾಡಿದೆ.

ಬಿಹಾರದಲ್ಲಿ ಎಎಪಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿತ್ತು. ಆದರೆ ಇತ್ತೀಚೆಗೆ ಆಪ್ ಮುಖ್ಯಸ್ಥ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಬಿಹಾರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿದ್ದರು.

ಈ ಹಿನ್ನೆಲೆ ಇಂದು ಮೊದಲ ಹಂತವಾಗಿ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಡಾ. ಮೀರಾ ಸಿಂಗ್-ಬೇಗುಸರಾಯ್ (ಬೇಗುಸರೈ), ಯೋಗಿ ಚೌಪಾಲ್-ಕುಶೇಶ್ವರಸ್ಥಾನ (ದರ್ಬಂಗಾ), ಅಮಿತ್ ಕುಮಾರ್ ಸಿಂಗ್-ತಾರಿಯಾ (ಸರಣ್), ಭಾನು ಭಾರತೀಯ-ಕಸ್ಬಾ (ಪೂರ್ಣಿಯಾ), ಸೌಭದಾ ಯಾದವ್-ಬೇನಿಪಟ್ಟಿ (ಮಧುಬನಿ), ಡಾ.ಪಿ. ಕುಮಾರ್ ರಜಾಕ್, ಡಾ. ಕುಮಾರ್-ಬಂಕಿಪುರ್ (ಪಾಟ್ನಾ), ಅಶ್ರಫ್ ಆಲಂ-ಕಿಶನ್‌ಗಂಜ್ (ಕಿಶನ್‌ಗಂಜ್), ಅಖಿಲೇಶ್ ನಾರಾಯಣ್ ಠಾಕೂರ್-ಪರಿಹಾರ್ (ಸೀತಾಮರ್ಹಿ), ಅಶೋಕ್ ಕುಮಾರ್ ಸಿಂಗ್-ಗೋವಿಂದಗಂಜ್ (ಮೋತಿಹಾರಿ), ಧರ್ಮರಾಜ್ ಸಿಂಗ್-ಬಕ್ಸರ್ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.

ಬಿಹಾರ ಚುನಾವಣಾ ವೇಳಾಪಟ್ಟಿ

ಇಂದು ಸೋಮವಾರ(ಅ. 06) ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣಾ ವೇಳಾಪಟ್ಟಿ-2025 ಪ್ರಕಟಿಸಿದೆ. ನ. 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನ. 14  ಫಲಿತಾಂಶ ಘೋಷಣೆಯಾಗಲಿದೆ. 2020ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಎನ್‌ಡಿಎ 125 ಸ್ಥಾನಗಳನ್ನು ಗೆದ್ದರೆ, ಮಹಾಘಟಬಂಧನ್ 110 ಸ್ಥಾನಗಳನ್ನು ಗೆದ್ದಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net