

ಬಿಹಾರ: ಮುಂಬರುವ ಬಿಹಾರ ಚುನಾವಣೆಯಲ್ಲಿ (Bihar Election) ದಿವಂಗತ ನಟ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ದಿವ್ಯಾ ಗೌತಮ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.
ದಿಘಾ ಸ್ಥಾನಕ್ಕೆ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ನವೆಂಬರ್ 6 ರಂದು ಪ್ರಥಮ ಹಂತದಲ್ಲಿ ಮತದಾನ ನೆರವೇರುವುದರಿಂದ, ದಿವ್ಯಾ ಅವರು ಅಕ್ಟೋಬರ್ 15 ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.
ಮಹಾಘಟಬಹನ್ಹನ್ ಅಭ್ಯರ್ಥಿಗಳ ಘೋಷಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಆದರಿಂದ ಔಪಚಾರಿಕ ಪಟ್ಟಿ ಬಿಡುಗಡೆ ಆಗುವವರೆಗೂ ನಾವು ಕಾಯುತ್ತಿದ್ದೇವೆ. ಹಾಗೆಯೇ ದಿವ್ಯಾ ಅವರು ಬುಧವಾರ (ಅ.15) ನಾಮಪತ್ರ ಸಲ್ಲಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಸಿಪಿಐನ ಹಿರಿಯ ನಾಯಕ ಕುಮಾರ್ ಪರ್ವೇಜ್ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ದಿವ್ಯಾ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಪದವಿ ಪಡೆದಿದ್ದಾರೆ. ಅವರು ಕಾಲೇಜು ದಿನಗಳಿಂದಲೂ ರಾಜಕೀಯದಲ್ಲಿ ಪ್ರೇರಿತರಾಗಿದ್ದರು. ಇವರು 2012 ರಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಟಿಕೆಟ್ನಲ್ಲಿ ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ (PUSU) ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು.
ರಾಜಕೀಯದ ಜೊತೆ ದಿವ್ಯಾ ಅವರ ಶೈಕ್ಷಣಿಕ ದಾಖಲೆಯು ಉತ್ತಮವಾಗಿದೆ. ತಮ್ಮ ಮೊದಲ ಪ್ರಯತ್ನದಲ್ಲೇ 64ನೇ ಬಿಹಾರ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸರಬರಾಜು ನಿರೀಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದರೂ ಕೂಡ ಆ ಕೆಲಸವನ್ನು ನಿರಾಕರಿಸಿದರು. ಪ್ರಸ್ತುತ ಅವರು ಪಿಎಚ್ಡಿ ಪದವಿ ಪಡೆಯುತ್ತಿದ್ದಾರೆ.
ದಿಘಾ ಕ್ಷೇತ್ರದಲ್ಲಿ ಪ್ರಸ್ತುತ ಎನ್ಡಿಎದೊಳಗಿನ ಬಿಜೆಪಿ ವಶದಲ್ಲಿದೆ. 2020ರಲ್ಲಿ ನಡೆದ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಸಂಜೀವ್ ಚೌರಾಸಿಯಾ 97,044 ಮತಗಳನ್ನು ಗಳಿಸುವ ಮೂಲಕ ಈ ಸ್ಥಾನವನ್ನು ಪಡೆದುಕೊಂಡಿದ್ದರು. ಇನ್ನು ಸಿಪಿಐನ ಶಶಿ ಯಾದವ್ 50,971 ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.
ಈ ವರ್ಷದ ಚುನಾವಣೆಗೆ ಎನ್ಡಿಎ ತನ್ನ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದ ನಂತರ, ಮಹಾಮೈತ್ರಿಕೂಟವು ಹಂಚಿಕೆಯಾದ ಸೀಟುಗಳ ಬಗ್ಗೆ ಮಾತುಕತೆ ನಡೆಸಿದೆ. ಇನ್ನು ಈ ವ್ಯವಸ್ಥೆಯೊಳಗೆ ಸಿಪಿಐ ದಿಘಾ ಸ್ಥಾನವನ್ನು ಪಡೆದುಕೊಂಡಿದ್ದು, ದಿವ್ಯಾ ಗೌತಮ್ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಬಿಹಾರ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. (ಏಜೆನ್ಸೀಸ್)