BiggBoss ವಿನ್ನರ್​ ಹನುಮಂತುಗೆ 50 ಲಕ್ಷ ರೂನಲ್ಲಿ ಸಿಗೋ ಮೊತ್ತ ಎಷ್ಟು? ಟ್ಯಾಕ್ಸ್ ಕಟ್ಟಾಗುವುದೆಷ್ಟು, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Hanumanthu
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) 11ನೇ ಆವೃತ್ತಿಯೂ ಜನವರಿ 26ರಂದು ಮುಕ್ತಾಯಗೊಂಡಿದ್ದು, 11ನೇ ಆವೃತ್ತಿಯ ವಿನ್ನರ್​ ಆಗಿ ಗಾಯಕ ಹನುಮಂತು ಹೊರಹೊಮ್ಮಿದ್ದಾರೆ. ವಿಜೇತ ಹನುಮಂತುಗೆ ವಾಹಿನಿಯು ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನವನ್ನು ನೀಡಿದ್ದು, ಮೊದಲನೇ ರನ್ನರ್​ಅಪ್​ಗೆ 15 ಲಕ್ಷ ರೂ., ಎರಡನೇ ರನ್ನರ್​ಅಪ್​ಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡಿದೆ.

ಸದ್ಯ ಬಹುಮಾನವಾಗಿ ಬಂದಿರುವ ಹಣಕ್ಕೆ ಹನುಮಂತು ಹಾಗೂ ಇತರೆ ವಿಜೇತರು ಸರ್ಕಾರಕ್ಕೆ ದುಬಾರಿ ಬೆಲೆಯ ತೆರಿಗೆ ಕಟ್ಟಬೇಕಾಗಿದೆ. ಭಾರತದಲ್ಲಿ ಸರ್ಕಾರ ರೂಪಿಸಿರುವ ನಿಯಮದ ಪ್ರಕಾರ ಲಾಟರಿ, ಲಕ್ಕಿ ಡಿಪ್​ ಸೇರಿದಂತೆ ಬಹುಮಾನ ರೂಪದಲ್ಲಿ ಬಂದ ಹಣಕ್ಕೆ ಶೇ. 30ರಷ್ಟು ತೆರಿಗೆ ಕಟ್ಟಬೇಕಾಗಿದೆ. 10,000 ರೂಪಾಯಿಗಿಂತ ಮೇಲ್ಪಟ್ಟ ಬಹುಮಾನ ಹಣಕ್ಕೆ ಈ ತೆರಿಗೆ ಅನ್ವಯಿಸಲಿದ್ದು, ಬಹುಮಾನ ಮೊತ್ತ ಪಡೆದ ಹನುಮಂತು ಹಾಗೂ ಇತರೆ ಸ್ಫರ್ಧಿಗಳು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಿದೆ.

BBKS 11

ವಿನ್ನರ್ ಆಗಿರುವ ಹನುಮಂತು 50 ಲಕ್ಷ ರೂಪಾಯಿ ಹಣ ಪಡೆದಿದ್ದು, ಅವರು ಸರ್ಕಾರಕ್ಕೆ 15 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಿದೆ. ರನ್ನರ್​ಅಪ್ ಆಗಿರುವ ತ್ರಿವಿಕ್ರಮ್​ಗೆ 15 ಲಕ್ಷ ರೂಪಾಯಿ ಬಹುಮಾನವಾಗಿ ಬಂದಿದ್ದು, ಅವರು ಸರ್ಕಾರಕ್ಕೆ 4.5 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಿದೆ. ಎರಡನೇ ರನ್ನರ್​ಅಪ್​ ಆಗಿರುವ ರಜತ್ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಬಂದಿದ್ದು, ಅವರು ಸರ್ಕಾರಕ್ಕೆ 3 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಿದೆ. ವಾಹಿನಿಯು ಸರ್ಕಾರಕ್ಕೆ ತೆರಿಗೆ ಪಾವತಿಸಿ ಉಳಿದ ಹಣವನ್ನು ವಿಜೇತರ ಖಾತೆಗೆ ಜಮೆ ಮಾಡಲಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net