‘ಪಳಾರ್’ ಗಿಲ್ಲಿನಟ : ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ‘ಬಿಗ್‌ಬಾಸ್’ ವಿನ್ನರ್

ಪಳಾರ್ ಪೋಸ್ಟರ್​
ಪಳಾರ್ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್ ವುಡ್ ನಲ್ಲಿ ಪೂರ್ಣ ಪ್ರಮಾಣದ ನಾಯಕನಾದ ಗಿಲ್ಲಿ ನಟ
  • ಹುಟ್ಟುಹಬ್ಬದಂದೇ ಹೊಸ ಚಿತ್ರ ಘೋಷಣೆ ಮಾಡಿದ ಹಾಸ್ಯ ಕಲಾವಿದ
  • ನನಗೆ ಸೂಕ್ತ ಕಥೆ ಎಂದ ಸಮರ್ಥಿಸಿಕೊಂಡ ಬಿಗ್ ಬಾಸ್ ವಿನ್ನರ್
ಬೆಂಗಳೂರು: ‘ಬಿಗ್‌ಬಾಸ್ ಕನ್ನಡ ಸೀಸನ್ 12’ ಗೆದ್ದ ಬಳಿಕ ಹಾಸ್ಯ ಕಲಾವಿದ ಗಿಲ್ಲಿ ನಟರಾಜ್ ಅದೃಷ್ಟ ಬದಲಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಕಂಡ ಬೆನ್ನಲ್ಲೇ ಗಿಲ್ಲಿ ನಟ ಇತ್ತೀಚೆಗೆ ‘ಬಾಂಬೆ ಮಿಠಾಯಿ’ ನಿರ್ದೇಶಕ ಚಂದ್ರಮೋಹನ್ ಜತೆ ಸೇರಿ ಹೊಸ ಸಿನಿಮಾ ಘೋಷಿಸಿದ್ದರು. ಈ ಚಿತ್ರದ ಮೂಲಕ ಗಿಲ್ಲಿ ನಟ ಪೂರ್ಣಪ್ರಮಾಣದ ನಾಯಕರಾಗುತ್ತಿದ್ದಾರೆ. ಇನ್ನು ಅವರ ಹುಟ್ಟುಹಬ್ಬವಾದ ಭಾನುವಾರದಂದು ಶ್ರೀಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸಿನಿಮಾ ಟೈಟಲ್ ಅನೌನ್ಸ್ ಮಾಡಿ, ಮುಹೂರ್ತ ನೆರವೇರಿಸಲಾಯಿತು. ಚಿತ್ರಕ್ಕೆ ‘ಪಳಾರ್’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ನಟ ರವಿಚಂದ್ರನ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮರಾಕ್ಕೆ ಚಾಲನೆ ನೀಡಿದರು. ಮುಹೂರ್ತದ ಬಳಿಕ ಗಿಲ್ಲಿ ನಟ, ‘ಈ ಹಿಂದೆ ಸಿನಿಮಾದ ಆರ್ಟ್ ವಿಭಾಗ ಮತ್ತು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಕಾರಣ ನನಗೆ ಒಪ್ಪುವ ಸೂಕ್ತ ಕಥೆ ಆಯ್ಕೆ ಮಾಡಲು ಸಾಧ್ಯವಾಯಿತು. ‘ಬಿಗ್‌ಬಾಸ್’ ಬಳಿಕ ಹಲವು ಆರ್ ಬಂದಿದ್ದವು. ಆದರೆ, ‘ಪಳಾರ್’ ಕಥೆ ಮತ್ತು ನಿರ್ದೇಶಕರು ನನಗೆ ಸೂಕ್ತ ಅನಿಸಿತು, ಹಾಗಾಗಿ ಒಪ್ಪಿಕೊಂಡೆ. ನಾನು ಕೂಡ ಇದೇ ಮೊದಲ ಬಾರಿಗೆ ನಾಯಕನಾಗುತ್ತಿರುವುದರಿಂದ ಈ ಜವಾಬ್ದಾರಿ ಹೊಸದು. ಇನ್ನು ಹೊಸಬರ ಜತೆ ಕೆಲಸ ಮಾಡುವುದೆಂದರೆ ಭಯ ಇರುತ್ತದೆ. ಆದರೆ, ‘ಪಳಾರ್’ ನಿರ್ದೇಶಕರು, ನಿರ್ಮಾಪಕರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವುದರಿಂದ ನನಗೂ ಅನುಕೂಲ. ಹಳ್ಳಿ ಸೊಗಡಿನಲ್ಲಿ ‘ಪಳಾರ್’ ಎಂದರೆ ಕಿಲಾಡಿ ಎಂದರ್ಥ. ಸೂಕ್ತ ಸಮಯದಲ್ಲಿ ಹೀರೋಯಿನ್ ಪರಿಚಯಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಪಳಾರ್’ ಚಿತ್ರವನ್ನು ಅರ್ಪಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net