

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 14ನೇ ಕಾಲಿಟ್ಟಿದ್ದು, ಸ್ಫರ್ಧಿಗಳು ಜಿದ್ದಿಗೆ ಬಿದ್ದವರಂತೆ ಆಟವಾಡುತ್ತಿದ್ದಾರೆ. ಲಕ್ಷುರಿ ಬಜೆಟ್ ಟಾಸ್ಕ್ ಬಳಿಕ ಮನೆಗೆ ಬೇಕಾಗಿದ್ದ ದಿನಸಿಗಳನ್ನು ಆರ್ಡರ್ ಮಾಡುವುದು ವಾಡಿಕೆ. ಆದರೆ, ಕೆಲವು ಸ್ಫರ್ಧಿಗಳು ಮಾಡಿದ ತಪ್ಪಿನಿಂದಾಗಿ ಅವಕಾಶ ಕೈತಪ್ಪಿತ್ತು. ಇದೀಗ ವಾಪಸ್ ಪಡೆಯಲಾಗಿದ್ದ ಲಕ್ಷುರಿ ಬಜೆಟ್ಅನ್ನು ಹಿಂಪಡೆಯಲು ಮನೆಮಂದಿಗೆ ಬಿಗ್ಬಾಸ್ (BiggBoss) ಟಾಸ್ಕ್ ಒಂದನ್ನು ನೀಡಿದ್ದು, ಈ ವೇಳೆ ಮಂಜು ಹಾಗು ಇತರೆ ಸ್ಫರ್ಧಿಗಳ ನಡುವೆ ಮಾತಿನ ಚಕಮಕಿಯಾಗಿದೆ.
ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಬಿಗ್ಬಾಸ್ (BiggBoss) ಸ್ಫರ್ಧಿಗಳಿಗೆ ಟಾಸ್ಕ್ ನೀಡಿದ್ದು, ಇರುವ 9 ಮಂದಿ ಪೈಕಿ 6 ಜನ ಟಾಸ್ಕ್ನಲ್ಲಿ ಆಡಬೇಕಿದೆ. ಇನ್ನೂ ಟಾಸ್ಕ್ನ ವಿಚಾರಕ್ಕೆ ಬರುವುದಾದರೆ ಉಗ್ರಂ ಮಂಜು ಚೈತ್ರಾ ಹಾಗೂ ಧನರಾಜ್ಗೆ ಆಡಲು ಆಗುವುದಿಲ್ಲ ಎಂಬಂತೆ ಮಾತನಾಡಿದ್ದು, ಮಧ್ಯಪ್ರವೇಶಿಸುವ ತ್ರಿವಿಕ್ರಮ್ ನಿಮ್ಮ ಪ್ರಾಬ್ಲಮ್ ಏನೆಂದು ಪ್ರಶ್ನಿಸಿದ್ದಾರೆ. ಬಳಿಕ ನಿಮ್ಮ ಕಡೆಯಿಂದ ಏನಾದರೂ ಡ್ಯಾಮೇಜ್ ಆದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಬಳಿಕ ಮಂಜು ಹಾಗೂ ಚೈತ್ರಾ ಟಾಸ್ಕ್ ಆಡಿದ್ದು, ಮಂಜು ಎಡವಿರುವುದನ್ನ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ.
ಟೀಕೆ ಓಕೆ, ಸೋತ್ರೆ ಜೋಕೆ! ಎಂಬ ಶೀರ್ಷಿಕೆಯಡಿ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಮಂಜು ವಿಫಲರಾಗುತ್ತಿದ್ದಂತೆ ಮೋಕ್ಷಿತಾ ಕೋಪಿಸಿಕೊಂಡಿದ್ದು, ಹನುಮಂತ, ಭವ್ಯಾ ಹಾಗೂ ತ್ರಿವಿಕ್ರಮ್ ಕುಳಿತು ವೀಕ್ಷಿಸುತ್ತಿರುತ್ತಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದ್ದು, ಅಂತಿಮವಾಗಿ ಟಾಸ್ಕ್ನಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.