ಬಿಗ್​​ ಬಾಸ್​ ಸ್ಪರ್ಧಿ ಸಿರಿ ಮದುವೆ ಆಗದೇ ಇರೋದಕ್ಕೆ ಇದೇ ಕಾರಣ; ಸೋದರಿ ಬಿಚ್ಚಿಟ್ಟ ರಹಸ್ಯ..!

ಸಸಸಸಸ
Published on

ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಮಿಂಚುತ್ತಿರುವ ನಟಿ ಸಿರಿಗೆ ಇನ್ನೂ ಮದುವೆಯಾಗಿಲ್ಲ. ಅಂತೆಯೇ ನಟಿ ಸಿರಿ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಿಗ್​ಬಾಸ್​​ ಮನೆಯಲ್ಲಿ ತಮ್ಮ ಆಟವನ್ನ ಸೂಪರ್​ ಆಗಿಯೇ ಆಡುತ್ತಿದ್ದಾರೆ.


ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾಗ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗಲ್ಲ. ಇದೇ ಸಮಯಕ್ಕೆ ಮದುವೆ ಆಗಬೇಕು ಈ ವರ್ಷನೇ ಮದುವೆ ಆಗಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿರಿ ಅವರ ಅಕ್ಕ ಹೇಳಿದ್ದಾರೆ.

ವೈಯಕ್ತಿಕ ಜೀವನದಲ್ಲಿ ನಾವಿಬ್ಬರು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಇಬ್ಬರೂ ವೈಯಕ್ತಿಕ ಜೀವನದಲ್ಲಿ ನಷ್ಟಗಳನ್ನು ಅನುಭವಿಸಿದ್ದೇವೆ. ಇದೆಲ್ಲ ಸಿರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸಿರಿ ಒಪ್ಪಿಕೊಳ್ಳುವಂತ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಸಿರಿ ಅಕ್ಕ ಆಗಿ ನಾನು ಬೇಗ ಮದುವೆ ಮಾಡಿಕೊಂಡೆ.


ಸಿರಿ ನನ್ನ ಜೀವನದಿಂದ ಏನೋ ಕಲಿತಿರಬಹುದು. ಇದೇ ಕಾರಣಕ್ಕೆ ಆಕೆಯ ಮದುವೆಗೆ ತಡ ಮಾಡುತ್ತಿದ್ದಾಳೆ ಎಂದಿದ್ದಅರೆ. ಹಾಗಾಗಿ ಸದ್ಯದ ಮಟ್ಟಿಗೆ ಸಿರಿ ಮದುವೆ ಯಾವಾಗ? ಅನ್ನುವಂತವರಿಗೆ ಸಿರಿ ಸಹೋದರಿ ಉತ್ತರಿಸಿದ್ದಾರೆ.


ನಟಿ ತಾರಾ ಸಿರಿಯವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ, ಉತ್ತರಿಸಿದ್ದ ಸಿರಿ ನಾನು ಮದುವೆ ಮಾಡಿಕೊಳ್ಳಲು ಸಿದ್ಧ, ಆದರೆ ಸೂಕ್ತ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದರು. ಇದೀಗ ಸಿರಿ ಅವರ ಅಕ್ಕ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಬಳಿಕ ಸಿರಿ ಅವರಿಗೆ ಮದುವೆ ಆಫರ್‌ ಬರುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net