Bigg Boss ಮತ್ತೆ ಶುರು! 20ರಿಂದ ಪ್ರಸಾರ ಆರಂಭ

BBK 8
Published on

ಬೆಂಗಳೂರು: ನಿರೂಪಕ "ಕಿಚ್ಚ' ಸುದೀಪ್​ ಗೈರು, ಅರ್ಧಕ್ಕೆ ಮೊಟಕಾದ ಶೋ.. ಹೀಗೆ ಈ ಸಲದ ಬಿಗ್​ ಬಾಸ್​ ಸೀಸನ್​ 8 ಹಲವು ಹೊಸತುಗಳಿಗೆ ಸಾಯಾಗಿತ್ತು. ಇದೀಗ ವೀಕ್ಷಕರಿಗೆ ಮತ್ತೊಂದು ಹೊಸತನ್ನು ನೀಡಲು ಕರ್ಲಸ್​ ಕನ್ನಡ ವಾಹಿನಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇನೆಂದರೆ, ಅರ್ಧಕ್ಕೆ ನಿಂತಿದ್ದ ಬಿಗ್​ಬಾಸ್​ ಮತ್ತೆ ಶುರುವಾಗಲಿದೆ!

ಹೌದು, ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಇಂಥದ್ದೊಂದು ಮಾತು ಸದ್ಯ ಕಿರುತೆರೆ ವಲಯದಲ್ಲಿ ಸದ್ದು ಮಾಡುತ್ತಿದ್ದು, ಜೂನ್​ 20ರಿಂದ ಶೋ ಮತ್ತೆ ಆರಂಭವಾಗಲಿದೆಯಂತೆ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ 72ನೇ ದಿನಕ್ಕೆ ಮೊಟಕುಗೊಂಡಿದ್ದ ಈ ಶೋ, ಇದೀಗ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲಿದೆ. ಸ್ಪರ್ಧಿಗಳಾದ ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ರು ಗೌಡ, ಶುಭಾ ಪೂಂಜ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ, ಶಮಂತ್​ ಗೌಡ, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ, ಅರವಿಂದ್​, ದಿವ್ಯಾ ಸುರೇಶ್​ ಮತ್ತೆ ಬಿಗ್​ಬಾಸ್​ ಮನೆಗೆ ಎಂಟ್ರಿಕೊಡಲಿದ್ದಾರೆ.

ಸದ್ಯದ ಮಟ್ಟಿಗೆ 100ದಿನದ ಆಟ ಎಂದು ಹೇಳಲಾಗುತ್ತಿದ್ದು, ಶೋ ಶುರುವಾದ ಮೇಲೆ ಬದಲಾವಣೆ ಆಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net