ಐಷಾರಾಮಿ ಕಾರು ಖರೀದಿಸಿದ ಬಿಗ್‌ಬಾಸ್‌ ಖ್ಯಾತಿಯ ತುಕಾಲಿ ಸಂತೋಷ್

7cd2f432-0579-409f-8777-917ac285e3ca
Published on

ಬೆಂಗಳೂರು: ಬಿಗ್‌ ಬಾಸ್ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್,  ಕಿಯಾ ಕಾರನ್ನು ಖರೀದಿ ಮಾಡಿದ್ದಾರೆ. ತಮ್ಮ ಬಹುದಿನಗಳ ಕನಸು ನನಸಾದ ದಿನವೆಂದು ಸಂತಸವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಹುದಿನಗಳ ಕನಸು ನನಸಾದ ದಿನವೆಂದು ಬರೆದುಕೊಂಡು ಕಾರು ಖರೀದಿ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ತುಕಾಲಿ ಅವರ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿ ಒಳ್ಳೆಯದಾಗಲಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡ ತುಕಾಲಿ ಸಂತೋಷ್‌ಗೆ ಅದೃಷ್ಟದ ಬಾಗಿಲು ತೆರೆದಿತ್ತು. ತನ್ನ ಪ್ರಸಿದ್ಧಿಯಿಂದ ಬಿಗ್‌ಬಾಸ್‌ ಸೀಸನ್ 10ಕ್ಕೆ ಆಯ್ಕೆಯಾದರು.   ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಪುನಃ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಾಮಿಡಿ ಶೋಗಳಲ್ಲಿ ಅವರ ಪತ್ನಿ ಮಾನಸ ಅವರು ಕೂಡ ಭಾಗವಹಿಸುತ್ತಿದ್ದು, ಕುಟುಂಬದ ಆದಾಯ  ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ಖರೀದಿ ಮಾಡಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net