ಮೈಕಲ್​ ವರ್ತನೆಗೆ ಸಿಡಿದೆದ್ದ ನಮ್ರತಾ ಗೌಡ, ಬ್ಯಾಕ್‌ ತೋರಿಸಿ ಉಗಿಸಿಕೊಂಡ..!

nmix
Published on

ಕಿಚ್ಚ ಸುದೀಪ್​ ನೀಡಿದ ವಾರ್ನಿಂಗ್​​ ನಂತರ ಬಿಗ್​​ ಬಾಸ್​​ ಮನೆಯಲ್ಲಿ ಪ್ರತೀ ಮಾತಿಗೂ ಜಗಳವಾಗುತ್ತಲೇ ಇದೆ. ಬಿಗ್‌ ಬಾಸ್‌ ಮನೆಯ ಈ ವಾರದ ನಾಮಿನೇಷನ್‌ ಬಳಿಕ ವಿನಯ್‌ ಹಾಗೂ ಮೈಕೆಲ್‌ ಮನೆಯವರ ಬಳಿ ಕಾಲ್ಕರೆದು ಜಗಳಕ್ಕೆ ಇಳಿಯುತ್ತಿದ್ದಾರೆ.


ವಿನಯ್​​​​​ ಭಾಗ್ಯಶ್ರೀ ಜತೆಗೆ ಜಗಳವಾಡಿದ್ರೆ ಇತ್ತ ಕಡೆ ಮೈಕಲ್​ ನಮ್ರತಾಗೆ ಬ್ಯಾಕ್​ ತೋರಿಸಿ ಜಗಳವಾಡುವಂತಾಯ್ತು.


ತನಿಷಾ ಅವರು ಮೈಕೆಲ್​​ ನ್ನು ನಾಮಿನೇಟ್ ಮಾಡಿದರು. ಇದು ದೊಡ್ಡ ಕಲಹಕ್ಕೆ ಕಾರಣವಾಗಿದೆ. ನಾಮಿನೇಟ್‌ ಆದವರ ಹಣೆಗೆ ನಾಮಿನೇಟೆಡ್‌ ಎಂಬ ಪಟ್ಟಿಯನ್ನು ಹಚ್ಚಬೇಕಿತ್ತು. ತನಿಷಾ ಅಂಟಿಸಿದ ಈ ಪಟ್ಟಿಯನ್ನು ಮೈಕಲ್‌ ಅಗೌರವದಿಂದ ಅಂಟಿಸಿಕೊಂಡಿದ್ದರು.


ಮೈಕಲ್​ ತನಿಷಾ ಅಂಟಿಸಿದ್ದ ನಾಮಿನೇಟೆಡ್​​​ ಹಣೆಪಟ್ಟಿಯನ್ನ ಅವರ ಬ್ಯಾಕ್​ಗೆ ಅಂಟಿಸಿಕೊಂಡಿದ್ದರು. ಹಣೆಪಟ್ಟಿ ಬ್ಯಾಕ್​ಗೆ ಅಂಟಿಸಿಕೊಂಡಿದ್ದ ಮೈಕಲ್​ ಸುಮ್ಮನಿರಬೇಕಿತ್ತು. ಆದರೆ ಈತ ಅದನ್ನ ನಮ್ರತಾ ಗೌಡಗೆ ತೋರಿಸಿದ್ದಾರೆ. ಆಗ ನಮ್ರತಾ ಸಿಟ್ಟಿಗೆದ್ದಿದ್ದು, ಮೈಕಲ್​ಗೆ ಈ ರೀತಿ ವರ್ತಿಸಬೇಡ ಗೌರವ ಕೊಡು ಎಂದು ಹೇಳಿದ್ದಾರೆ.


ಮ್ರತಾ ಗೌಡ, ನಾನು ನಿನಗೆ ಗೌರವ ಕೊಡಲ್ಲ. ನಾನು ಶೋಗೆ ಗೌರವ ಕೊಡುವುದು. ನೀನು ಕೂಡ ಶೋಗೆ ಗೌರವ ನೀಡು. ಮಹಿಳೆಯರಿಗೆ ಗೌರವ ಕೊಡು. ಅಲ್ಲಂಟಿಸಿಕೊಂಡು ಇದನ್ನು ತೋರಿಸೋಕೆ ನೀನ್ಯಾರು ಎಂದು ಕೂಗಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net