

ಬೆಂಗಳೂರು : ( Bigg Boss ) ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಯಾವಾಗ ಶುರುವಾಗುತ್ತೋ ಅಂತ ವೀಕ್ಷಕರು ಕಾಯುತ್ತಿದ್ದರು. ಇದೀಗ ಖಾಸಗಿವಾಹಿನಿ ಲೋಗೋ ಲಾಂಚ್ ಮಾಡಿ ಬಿಗ್ ಬಾಸ್ ಈಸ್ ಬ್ಯಾಕ್ ಎಂದಿದೆ.
“ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ... ಈ ಸಲ ಕಿಚ್ಚು ಮಾತ್ರ ಹೆಚ್ಚು!” ಎಂಬ ಟೈಟಲ್ ಅಡಿಯಲ್ಲಿ ಬಿಗ್ ಬಾಸ್ ತಂಡವು ಲೋಗೋ ಲಾಂಚ್ ಮಾಡಿ, ರಿಲೀಸ್ ಮಾಡಿದೆ.
ಸೆಪ್ಟೆಂಬರ್ ತಿಂಗಳಲ್ಲಿ 'ಬಿಗ್ ಬಾಸ್-12' ಶುರುವಾಗಬಹುದು ಎನ್ನಲಾಗುತ್ತಿದ್ದು, ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಈ ಬಾರಿ ಕೂಡ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ. ಮುಂದಿನ ನಾಲ್ಕು ಸೀಸನ್‌ಗಳ ಕಾಲ ನಿರೂಪಣೆ ಮಾಡೋದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಾರಿ ಯಾವ ರೀತಿ ಶೋ ಮೂಡಿ ಬರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.