Karthik Mahesh - ಹ್ಯಾಟ್ರಿಕ್​ ಕಥೆಗಳ ಜತೆ ಹೊಸದೊಂದು ಕಾಮಿಡಿ ಕಿಕ್​ ಕೊಡಲು ರೆಡಿಯಾದ ನಟ

ಕಾರ್ತಿಕ್ ಮಹೇಶ್​
ಕಾರ್ತಿಕ್ ಮಹೇಶ್​
Published on
ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಅತ್ಯುತ್ತಮ ಆಡಿಯೋಗ್ರಫಿ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದ "ಡೊಳ್ಳು' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹೆಗ್ಗಳಿಕೆ ನಟ ಕಾರ್ತಿಕ್​ ಮಹೇಶ್​ಗೆ ಸಲ್ಲುತ್ತದೆ. ಆ ಬಳಿಕ ಕೆಲ ಧಾರಾವಾಹಿಗಳು, ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ "ಬಿಗ್​ಬಾಸ್​ ಕನ್ನಡ' ಸೀಸನ್​ 10ರ ಗೆಲುವು ಹೊಸ ಅವಕಾಶಗಳಿಗೆ ವೇದಿಕೆ ಕಲ್ಪಿಸಿತ್ತು. ಇದೀಗ ಬ್ಯಾಕ್​ ಟು ಬ್ಯಾಕ್​ ನಾಲ್ಕು ಚಿತ್ರಗಳಲ್ಲಿ ಕಾರ್ತಿಕ್​ ನಾಯಕನಾಗಿ ನಟಿಸುತ್ತಿದ್ದು, ಇನ್ನೊಂದು ಸಿನಿಮಾ ಘೋಷಣೆಯಾಗುವ ಹಂತದಲ್ಲಿದೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಕಾರ್ತಿಕ್​ ಮಹೇಶ್​ ಮಾತಿಗೆ ಸಿಕ್ಕಿದ್ದರು. "ಬಿ.ಎಂ. ಗಿರಿರಾಜ್​ ನಿರ್ದೇಶಿಸುತ್ತಿರುವ "ರಾಮರಸ' ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ವಿಎಫ್​​ಎಕ್ಸ್​ ಇರುವ ಕಾರಣ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. "ರಿಚಿ ರಿಚ್​' ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮತ್ತೊಂದು ಸಿನಿಮಾ "ಸೀತಾರಾಮರಾಜು' ಶೂಟಿಂಗ್​ ಮಳೆಗಾಲದಲ್ಲಿ ಪ್ರಾರಂಭವಾಗಲಿದ್ದು, ಸದ್ಯ ಪ್ರಿ-ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. ಪನ್ನಗಾಭರಣ ನಿರ್ದೇಶಿಸುತ್ತಿರುವ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತವಾಗಿ ಘೋಷಣೆಯಾದರೆ ಉತ್ತಮ. ಈ ಚಿತ್ರಗಳ ಪೈಕಿ ಎಲ್ಲವೂ ಅಂದುಕೊಂಡಂತಾದರೆ "ರಾಮರಸ' ಮತ್ತು "ಸೀತಾರಾಮರಾಜು' ಇದೇ ವರ್ಷ ರಿಲೀಸ್​ ಆಗುವ ನಿರೀೆಯಿದೆ' ಎಂದು ಮಾಹಿತಿ ನೀಡುತ್ತಾರೆ ಕಾರ್ತಿಕ್​ ಮಹೇಶ್​.

ಎಲ್ಲ ಜಾನರ್​ನಲ್ಲೂ ನಟಿಸಬೇಕು

ಕಾರ್ತಿಕ್​ ಮಹೇಶ್​ ಹೀಗೆ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ನಟಿಸುತ್ತಿದ್ದರೂ, ಎಲ್ಲ ಸಿನಿಮಾಗಳ ಜಾನರ್​ ಕೂಡ ಒಂದಕ್ಕಿಂತ ಒಂದು ಭಿನ್ನ. "ಒಬ್ಬ ನಟನಾಗಿ ಎಲ್ಲ ಜಾನರ್​ಗಳಲ್ಲಿ ನಟಿಸಬೇಕು, ಪ್ರಯೋಗ ಮಾಡಬೇಕು ಎಂಬುದು ನನ್ನಾಸೆ. "ರಾಮರಸ' ಥ್ರಿಲ್ಲರ್​ ಸಿನಿಮಾ. ನಾನಿಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ್ಯಾಮಿಲಿ ಡ್ರಾಮಾ ಜಾನರ್​ನ "ರಿಚಿ ರಿಚ್​'ನಲ್ಲಿ ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಪನ್ನಗಾಭರಣ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಔಟ್​ ಆ್ಯಂಡ್​ ಔಟ್​ ಕಲ್ಟ್​ ಕಾಮಿಡಿ ಕಂಟೆಂಟ್​ ಇದೆ. ಇನ್ನು "ಸೀತಾರಾಮರಾಜು' ಲವ್​ಸ್ಟೋರಿ. ಮೊದಲ ಬಾರಿಗೆ ಲವರ್​ ಬಾಯ್​ ರೀತಿಯ ಪಾತ್ರದಲ್ಲಿ ನಟಿಸಲಿದ್ದೇನೆ. ಹಾಗೇ ಮೊದಲ ಬಾರಿ ರೊಮ್ಯಾಂಟಿಕ್​ ಸಾಂಗ್​ ಇರಲಿದೆ' ಎಂದು ಹೇಳಿಕೊಳ್ಳುತ್ತಾರೆ.

ಒಟಿಟಿ ಬೇಕು, ಪರಭಾಷೆ ಬೇಡ

"ಪರಭಾಷೆಗಳಲ್ಲಿ ನಟಿಸುವ ಬಗ್ಗೆ ಯೋಚಿಸಿಲ್ಲ' ಎನ್ನುವ ಕಾರ್ತಿಕ್​, "ಮೊದಲು ನನ್ನ ಜನ ನನ್ನನ್ನು ಗುರುತಿಸಿ, ಇವನಿಗೆ ಎರಡು ತಾಸು ಸಮಯ ಕೊಡಬೇಕು ಅಂತ ನನಗಾಗಿ ಥಿಯೇಟರ್​ಗೆ ಬರಬೇಕು. ಆ ಬಳಿಕ ಬೇರೆ ಭಾಷೆಗೆ ಹೋಗುವ ಬಗ್ಗೆ ಯೋಚಿಸುತ್ತೇನೆ' ಎನ್ನುತ್ತಾರೆ. ಹಾಗೇ, ಅವರಿಗೆ ವೆಬ್​ಸರಣಿಯಲ್ಲೂ ಅವಕಾಶ ಬಂದಿತ್ತಂತೆ. ಆದರೆ, "ಆಗ ಮೂರು ಚಿತ್ರಗಳನ್ನು ಒಪ್ಪಿದ್ದೆ. ಲುಕ್ಸ್​ ಮತ್ತು ಡೇಟ್ಸ್​ ಹೊಂದಿಸುವುದು ಕಷ್ಟ ಅಂತ ಒಪ್ಪಿಕೊಳ್ಳಲಿಲ್ಲ. ಒಟಿಟಿ ಕೂಡ ಒಳ್ಳೆ ವೇದಿಕೆಯೇ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net